Ad Widget

ಮೊಗ್ರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ 48 ದಿನ ಗಣಪತಿ ಹವನ

ಗುತ್ತಿಗಾರು: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಮಾ.17 ರಿಂದ ಆರಂಭಗೊಂಡಿತು.

. . . . . . . . .

ಮೊಗ್ರದಲ್ಲಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನದ ನಿರ್ಮಾಣ ಹಾಗೂ ದೈವಸ್ಥಾನಗಳ ಅಭಿವೃದ್ದಿ ಕಾರ್ಯ ನಡೆಯಲಿದೆ. ಈ ಹಿಂದೆ ನಡೆದ ಅಷ್ಟಮಂಗಲ ಚಿಂತನೆಯ ಪ್ರಕಾರ ನಿರ್ಮಾಣವಾಗುವ ಈ ಕಾರ್ಯವು ನಿರ್ವಿಘ್ನವಾಗಿ ನಡೆಯಲು ಹಾಗೂ ಊರಿನ ಸಮಸ್ತ ಭಕ್ತರ ಹಿತಕ್ಕಾಗಿ 48 ದಿನಗಳ ಕಾಲ ನಿರಂತರವಾಗಿ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ ನಡೆಯಲಿದೆ. 14 ಬೈಲುಗಳ ಮೂಲಕ ನಿರಂತರವಾಗಿ ಈ ಕಾರ್ಯ ನಡೆಯಲಿದೆ

. . . . . . .

ಬುಧವಾರದಂದು ವೇ.ಮೂ.ಕೃಷ್ಣ ಭಟ್‌ ಮಡಪ್ಪಾಡಿ ಅವರು ಗಣಪತಿ ಹವನ ನೆರವೇರಿಸಿದರು. ಈ ಸಂದರ್ಭ ಮೊಗ್ರ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಚಿಕ್ಮುಳಿ, ಗೌರವಾಧ್ಯಕ್ಷ ಗಂಗಾಧರ ಭಟ್‌ ಪುಚ್ಚಪ್ಪಾಡಿ, ಗೌರವ ಸಲಹೆಗಾರರುಗಳಾದ ವೆಂಕಟ್ರಮಣ ಎಂ ಎನ್‌, ದೊಡ್ಡಣ್ಣ ಗೌಡ ಚಿಕ್ಮುಳಿ, ಪ್ರಧಾನ ಸಂಚಾಲಕ ಸತ್ಯನಾರಾಯಣ ಮೊಗ್ರ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಉಮೇಶ್‌ ಮಕ್ಕಿ, ಕೋಶಾಧಿಕಾರಿ ಕುಮಾರಸ್ವಾಮಿ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ, ಸಮಿತಿ ಉಪಾಧ್ಯಕ್ಷರುಗಳಾದ ರಾಧಾಕೃಷ್ಣ ತುಪ್ಪದಮನೆ, ಚನ್ನಕೇಶವ ಕಮಿಲ, ಸೀತಾರಾಮ ಚಿಕ್ಮುಳಿ ಮೊದಲಾದವರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading