ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿಯು ಮಾ. 19 ಮತ್ತು ಮಾ. 20 ರಂದು ನಡೆಯಲಿದೆ. ಒತ್ತೆಕೋಲ ನಡಾವಳಿಯ ಅಂಗವಾಗಿ ಮಾ. 19 ರಂದು ಸಂಜೆ ಗಂಟೆ 6.00ಕ್ಕೆ ಸ್ಥಾನದಿಂದ ಭಂಡಾರ ತೆಗೆಯುವುದು, ರಾತ್ರಿ ಗಂಟೆ 7.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ ಗಂಟೆ 8.00ರಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11.00ಕ್ಕೆ ಕುಳಿಚ್ಚಟ್ಟು, ರಾತ್ರಿ ಗಂಟೆ 1.00ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಧೀರದುಂಧುಬಿ’ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ. 20ರಂದು ಪ್ರಾತಃಕಾಲ ಗಂಟೆ 5.00ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಬೆಳಿಗ್ಗೆ ಗಂಟೆ 6.00ಕ್ಕೆ ಮಾರಿಕಳ, ಬೆಳಿಗ್ಗೆ 7.00ಕ್ಕೆ ಪ್ರಸಾದ ವಿತರಣೆ ಬಳಿಕ ಬೆಳಿಗ್ಗೆ ಗಂಟೆ 9.00ಕ್ಕೆ ಗುಳಿಗ ದೈವದ ನೇಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ದೈವದ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ರೈ ಕಳಂಜರವರು ವಿನಂತಿಸಿದ್ದಾರೆ.
- Thursday
- November 21st, 2024