ಹರಿಹರ ಪಲ್ಲತಡ್ಕ ಗ್ರಾ.ಪಂ ನ ಹರಿಹರ ಪಲ್ಲತಡ್ಕ ಪೇಟೆಯಲ್ಲಿ ಮದ್ಯ ಮಾರಾಟ ಕೇಂದ್ರ ಆರಂಭವಾಗುವುದಾಗಿ ಪ್ರಚಾರದಲ್ಲಿದ್ದು ಅದನ್ನು ವಿರೋಧಿಸಿ ಮಾ.16 ರಂದು ಹರಿಹರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು .
ಸಭೆಯಲ್ಲಿ ಗ್ರಾಮ ವನ್ನು ಮದ್ಯ ಮುಕ್ತವಾಗಿರಿಸಲು ಒಕ್ಕೊರಲ ಆಗ್ರಹ ವ್ಯಕ್ತವಾಗಿದ್ದು ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ರಚನೆ ರಚನೆಗೊಂಡಿತು. ಅಲ್ಲದೆ ಸಭೆಯಲ್ಲಿ ಹರಿಹರ ಗ್ರಾ.ಪಂ ನ ವಿಶೇಷ ಗ್ರಾಮ ಸಭೆಯನ್ನು ಕರೆದು 1994 ರ ನಿರ್ಣಯದಂತೆ ಜನರ ಅಭಿಪ್ರಾಯ ತೆಗೆದು ಮದ್ಯಮುಕ್ತ ಗ್ರಾಮ ನಿರ್ಣಯನ್ನು ಮತ್ತೆ ನಿರ್ಣಯಿಸಿ ಸರ್ಕಾರಕ್ಕೆ ಕಳುಹಿಸುವುದು ಹಾಗೂ ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆಗೆ ಭೇಟಿ ನೀಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ದುರ್ಗಾದಾಸ್ ಮಲ್ಲಾರ, ಮಾಧವ ಚಾಂತಾಳ, ಅನಂತ ಅಂಙಣ, ಸತೀಶ್ ಕೂಜುಗೋಡು, ಹಿಮ್ಮತ್ ಕೆ.ಸಿ, ಬಿಂದು ಪಿ, ಜಯಂತ ಬಾಳುಗೋಡು, ವಿಜಯ ಅಂಙಣ, ಪ್ರದೀಪ್ ಕುಮಾರ್ ಕೆ.ಎಲ್, ಪುಷ್ಪರಾಜ್ ಪಡ್ಪು, ಯಶವಂತ ಬಾಳುಗೋಡು, ಧ.ಗ್ರಾ.ಯೋ ಮೇಲ್ವಿಚಾರಕ ಸೀತಾರಾಮ ಉಪಸ್ಥಿತರಿದ್ದರು. ಬಾಲಸುಬ್ರಹ್ಮಣ್ಯ ಹರಿಹರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನೆಕಿದು, ಹರಿಹರ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು. ಬಾಲಸುಬ್ರಹ್ಮಣ್ಯ ಸ್ವಾಗತಿಸಿ, ಸತೀಶ್ ಟಿ ಎನ್ ವಂದಿಸಿದರು.
ಮದ್ಯಮುಕ್ತ ಗ್ರಾಮ ಸಮಿತಿಯ ಗೌರವಾಧ್ಯಕ್ಷ ರಾಗಿ ದುರ್ಗದಾಸ್ ಮಲ್ಲಾರ, ಅಧ್ಯಕ್ಷರಾಗಿ ಹಿಮ್ಮತ್ ಕೆ ಸಿ, ಕಾರ್ಯದರ್ಶಿಯಾಗಿ ಬಾಲಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಶ್ರೀಮತಿ ಬಿಂದು, ಕಾನೂನು ಸಲಹೆಗಾರರಾಗಿ ಪ್ರದೀಪ್ ಕುಮಾರ್ ಕೆ ಎಲ್, ಉಪಾಧ್ಯಕ್ಷರುಗಳಾಗಿ ಸತೀಶ್ ಟಿ ಎನ್, ಚಂದ್ರಹಾಸ ಶಿವಾಲ, ಮಾಧವ ಚಾಂತಾಳ, ಅನಂತ ಅಂಙಣ, ಜಯರಾಮ ಕರಂಗಲ್ಲು, ನಿತ್ಯಾನಂದ ಭೀಮಗುಳಿ, ಜಯಂತ ಬಾಳುಗೋಡು, ಗೌರವ ಸಲಹೆಗಾರರಾಗಿ ಪಂಚಾಯತ್ ಸದಸ್ಯರು ಹಾಗು ಧ.ಗ್ರಾ.ಯೋ. ಒಕ್ಕೂಟದ ಎಲ್ಲಾ ಪದಾಧಿಕಾರಿಗಳನ್ನು ಈ ಸಮಿತಿಗೆ ಸೇರ್ಪಡೆ ಮಾಡಲಾಯಿತು.