

ಮೇನಾಲ ಅಭಿವೃದ್ಧಿ ಬಳಗ ಇದರ ವತಿಯಿಂದ ಕರಿಯಮೂಲೆಯಿಂದ ಮೇನಾಲ ಶಾಲಾ ವಠಾರದವರೆಗೆ ಮಾರ್ಗದ ಎರಡು ಬದಿಯಲ್ಲಿ ಕಾಡು ಕಡಿದು ಸ್ವಚ್ಛ ಮಾಡಲಾಯಿತು ಮತ್ತು ಮೇನಾಲ ಶಾಲೆಯ ತೆಂಗಿನ ಮರದ ಬುಡಕ್ಕೆ ಸೊಪ್ಪು ಹಾಕಿ ಶ್ರಮದಾನ ಮಾಡಲಾಯಿತು. ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಪ್ರಸಾದ್ ರೈ ಮೇನಾಲ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಸುಧೀರ್ ರೈ ಮೇನಾಲ, ಶ್ರೀಧರ್ ಮಣಿಯಾಣಿ ಮೇನಾಲ, ಮನೋಜ್ ರೈ ಮೇನಾಲ, ಚಂದ್ರಶೇಖರ ಪಲ್ಲತ್ತಡ್ಕ, ಶರತ್ ರಾವ್ ತುದಿಯಡ್ಕ, ಕೃಷ್ಣಪ್ಪ ಕಲ್ಲಗುಡ್ಡೆ, ಕೃಷ್ಣ ಬೆಳ್ಚಪಾಡ, ಜಯರಾಮ ಮೇನಾಲ, ರಾಜೇಶ್ ಗೌಡ ಮೇನಾಲ, ದಾಮೋದರ ಮೂಲ್ಯ ಮೇನಾಲ,ಸುಂದರ ಬಾಡೇಲು, ಮುಸ್ತಫಾ ಬಾಡೇಲು, ಕೃಷ್ಣಪ್ಪ ಪಲ್ಲತ್ತಡ್ಕ, ಗಂಗಾಧರ ಬೆಳ್ಚಪಾಡ ಮೇನಾಲ, ಯತೀಶ್ ಗೌಡ ಮೇನಾಲ, ಮನಮೋಹನ ಕಲ್ಲಗುಡ್ಡೆ, ಭಾಸ್ಕರ್ ಕಲ್ಲಗುಡ್ಡೆ ಭಾಗವಹಿಸಿದ್ದರು.