ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು ಬೆಳ್ಳಾರೆಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಇಂದು ಆರಂಭಗೊಂಡಿತು.
ಇಂದು ಬೆಳಿಗ್ಗೆ ಗೊನೆ ಮುಹೂರ್ತ, ಜಾಗದ ಪಂಜುರ್ಲಿಗೆ ತಂಬಿಲ, ಸಂಜೆ ಗುಳಿಗ ದೈವದ ಎಣ್ಣೆ ಬೂಳ್ಯ ನಡೆದು ಗುಳಿಗ ದೈವದ ನೇಮೋತ್ಸವ ನಡೆಯಿತು. ಆ ಬಳಿಕ ಶ್ರೀ ಮೊಗೇರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆ ಬೂಳ್ಯ ನಡೆಯಿತು.
ಸಂಜೆ ಸಭಾ ಕಾರ್ಯಕ್ರಮ ನೆರವೇರಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ ಬೂಡು-ಬೆಳ್ಳಾರೆ ಇದರ ಅಧ್ಯಕ್ಷರಾದ ಸುಂದರ ತೊಡಿಕಾನ ವಹಿಸಿದ್ದರು.
ಮಂಗಳೂರು ಬಿ.ಇ.ಎಂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಐತ್ತಪ್ಪ ಅಲೆಕ್ಕಾಡಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮದ ಉದ್ಘಾಟನೆಗೈದು ಯುವಜನತೆ ಶಿಕ್ಷಣದಿಂದ ಅತ್ಯುತ್ತಮ ಸಾಧನೆ ನಿರ್ವಹಿಸಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಕ್ಷೇತ್ರದ ತಾ.ಪಂಚಾಯತ್ ಸದಸ್ಯೆ
ಶ್ರೀಮತಿ ನಳಿನಾಕ್ಷಿ, ಬೆಳ್ಳಾರೆ ಘಟಕದ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ (ರಿ.)ಸುಳ್ಯ ಇದರ ಸೇವಾಪ್ರತಿನಿಧಿ ಶ್ರೀಮತಿ ಪವಿತ್ರಾ ಪಾಟಾಜೆ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಾಜೆ, ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ, ಬೆಳ್ಳಾರೆ ಕಾಮಧೇನು ಗೋಲ್ಡ್ ಪ್ಯಾಲೆಸ್ ಮಾಲಕರಾದ ಎಂ.ಮಾಧವ ಗೌಡ, ನೇಮೋತ್ಸವ ಉಸ್ತುವಾರಿ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷರಾದ ನಾರಾಯಣ, ಬೂಡು-ಬೆಳ್ಳಾರೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಮಹಿಳಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಾಧಾ ಕಲಾಯಿ, ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಗೌರವಾಧ್ಯಕ್ಷರಾದ ಕರಿಯ ಬೀಡು, ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ನೇಮೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸುಂದರ ಪುಡ್ಕಜೆ, ಶ್ರೀ ಆದಿನಾಗಬ್ರಹ್ಮ ಗರಡಿ ಸಮಿತಿಯ ಪದಾಧಿಕಾರಿ ಶ್ರೀಮತಿ ಸರೋಜಾ, ಭ್ರಷ್ಟಾಚಾರ ನಿಗ್ರಹದಳದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ರೈ ಮರುವಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೊಗೇರ ಸಮಾಜ ಸೇವಾ ಸಂಘ ಬೆಳ್ಳಾರೆ ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಕುಮಾರಿ ಚೈತ್ರಾ, ಪ್ರಜ್ವಲ್ ಸಿ.ವಿ., ಶರತ್ ಕೆ, ಸುದರ್ಶನ್ ಬಿ.ಕೆ., ಸುಮಂತ್ ಕೆ, ಸಾಗರ್ ಪಾಟಾಜೆ, ಹಿರಿಯ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಕಮಲಾ ರಮೇಶ್ ಮುಪ್ಪೇರ್ಯ, ಕೊರೋನ ವಾರಿಯರ್ ಶ್ರೀಮತಿ ಗೀತಾ ರಮೇಶ್ ಪಾಟಾಜೆ, ಕನಕಮಜಲು ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ
ಶ್ರೀಮತಿ ಪುಷ್ಪಾವತಿ ಚೀಮುಳ್ಳು ಇವರುಗಳನ್ನು ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಕುಮಾರಿ ಚೈತ್ರ, ಪ್ರಜ್ವಲ್.ಸಿ.ವಿ ಹಾಗೂ ಶ್ರೀಮತಿ ಕಮಲಾ ರಮೇಶ್ ಮುಪ್ಪೇರ್ಯ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದಿವ್ಯಾ ಹಾಗೂ ಸುಚಿತ್ರಾ ಪ್ರಾರ್ಥಿಸಿ, ಕು.ಸುಮಿತ್ರ ಬೂಡು ಸ್ವಾಗತಿಸಿದರು. ಸಾಗರ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಶ್ರೀ ಮೊಗೇರ್ಕಳ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಗಂಟೆ 10.00 ಕ್ಕೆ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು, ರಾತ್ರಿ ಗಂಟೆ 12.00 ಕ್ಕೆ ಶ್ರೀ ತನ್ನಿಮಾನಿಗ ದೈವವು ಗರಡಿ ಇಳಿದು ಪ್ರಸಾದ ವಿತರಣೆ ನಡೆಯಲಿದೆ.
ಮಾ. 15 ರಂದು (ನಾಳೆ) ಬೆಳಿಗ್ಗೆ ಗಂಟೆ 5.00 ಕ್ಕೆ ಶ್ರೀ ಮೊಗೇರ್ಕಳ ದೈವಗಳು ಹಾಲು ಕುಡಿಯುವುದು, ಬೆಳಿಗ್ಗೆ ಗಂಟೆ 7.00 ಕ್ಕೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.