ಸುರ್ವೆ ಕಲ್ಚರಲ್ ಅಕಾಡೆಮಿ (ರಿ), ಬೆಂಗಳೂರು, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.) ಬೆಂಗಳೂರು, ಇವರು ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ 2021 ನೇ ಸಾಲಿನ “ಕರ್ನಾಟಕ ಶಿಕ್ಷಣ ರತ್ನ ರಾಜ್ಯಪ್ರಶಸ್ತಿ”ಗೆ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ವಲಯ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿದ್ದು, 4 ಕೃತಿಗಳ ಪ್ರಕಟ, ಕರ್ನಾಟಕ ರಾಜ್ಯ ಹಾಗೂ ನೆರೆಯ ಕಾಸರಗೋಡಿನ ಹಲವು ಕವಿಗೋಷ್ಠಿ ಹಾಗೂ ಸಾಹಿತ್ಯ ಗೋಷ್ಠಿಗಳಲ್ಲಿ ಕವನವಾಚನ ಹಾಗೂ ಉಪನ್ಯಾಸಗಳನ್ನು ನೀಡಿದವರು.
ಶಿಕ್ಷಣ ಸಂಸ್ಥೆಗಳಲ್ಲಿ, ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಮಾತ್ರವಲ್ಲದೇ ಚಂದನ ಟಿವಿಯಲ್ಲಿ ಸೇರಿದಂತೆ 1500ಕ್ಕೂ ಅಧಿಕ ತರಬೇತಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಹಾಗೂ ಯುವ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ ಕರ್ತರಾದವರು. ಸುಳ್ಯ ತಾಲೂಕಿನಿಂದ ಪ್ರಪ್ರಥಮ ಬಾರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ (RD Parade) ಭಾಗವಹಿಸಿದ ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿನ 45 ವರ್ಷಗಳ ಇತಿಹಾಸದಲ್ಲಿ ಎನ್ನೆಸ್ಸೆಸ್ ನಿಂದ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿದ ಕಾಲೇಜಿನ ಏಕೈಕ ಶಿಬಿರಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡುದಲ್ಲದೇ ಸ್ಕೌಟ್ ಗೈಡ್ ನ ಹಿಮಾಲಯನ್ ವುಡ್ ಬ್ಯಾಡ್ಜ್ ಪ್ರಶಸ್ತಿ, ಚುಟುಕುಶ್ರೀ ರಾಜ್ಯಪ್ರಶಸ್ತಿ, ಚಂದನ ಟಿವಿಯ ಸ್ವರಮಾಧುರ್ಯ ಪ್ರಶಸ್ತಿ ಪಡೆದವರು.
ಶಿಕ್ಷಣ ಕ್ಷೇತ್ರದಲ್ಲಿದ್ದು ನಾಲ್ಕು ಅಂತಾರಾಷ್ಟ್ರೀಯ, 18 ರಾಷ್ಟ್ರೀಯ, ನಾಲ್ಕು ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದುದಲ್ಲದೇ 10ಕ್ಕೂ ಅಧಿಕ ವಿಚಾರಸಂಕಿರಣದಲ್ಲಿ ಭಾಗವಹಿಸಿದವರು. ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದವರು. ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಇವರ ಒಟ್ಟಾರೆ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರವನ್ನು ಪರಿಗಣಿಸಿ ರಾಜ್ಯಮಟ್ಟದ “ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ”ಯನ್ನು ನೀಡಿ ಸಂಸ್ಥೆ ಗುರುತಿಸಿದೆ.
17 -03- 2021 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯುವ ಯೋಗ ಭಾರತ ಸಾಂಸ್ಕೃತಿಕ ಉತ್ಸವ 2021ರ “ಸಾಂಸ್ಕ್ರತಿಕ ಪ್ರತಿಭೋತ್ಸವ” ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಡಾ.ಅನುರಾಧಾ ಕುರುಂಜಿಯವರು
ಕುರುಂಜಿ ಪದ್ಮಯ್ಯ ಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರಿ. ಕೆವಿಜಿ ಪಾಲಿಟೆಕ್ನಿಕ್ ನ ಶಿಕ್ಷಕರಾದ ಚಂದ್ರಶೇಖರ ಬಿಳಿನೆಲೆಯವರ ಪತ್ನಿ.
- Friday
- November 22nd, 2024