ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ). ಧರ್ಮಸ್ಥಳ ಇದರ ಆರ್ಥಿಕ ಸಹಕಾರದೊಂದಿಗೆ ಕೊಲ್ಲಮೊಗ್ರು ಗ್ರಾಮಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ ಮಲ್ಲಾಜೆ, ಗೆಳೆಯರ ಬಳಗ ತಂಬಿನಡ್ಕ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರು, ವಿಪತ್ತು ನಿರ್ವಹಣಾ ಸಮಿತಿ ಸುಬ್ರಹ್ಮಣ್ಯ ವಲಯ, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಸ್ವ-ಸಹಾಯ/ಪ್ರಗತಿಬಂಧು ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ಇವರುಗಳ ಸಹಭಾಗಿತ್ವದಲ್ಲಿ 329ನೇ ನಮ್ಮೂರು ನಮ್ಮ ಕೆರೆ ಯೋಜನೆಯ ಮುಖಾಂತರ ಕೊಲ್ಲಮೊಗ್ರದ ದೊಡ್ಡಣ್ಣ ಶೆಟ್ಟಿ ಕೆರೆಯ ಹೂಳೆತ್ತುವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಮಾ.12 ರಂದು ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾ ತಿಮ್ಮಪ್ಪರವರು ದೀಪ ಬೆಳಗಿಸಿ ನಮ್ಮ ಪೂರ್ವಜರ ಕಾಲದಲ್ಲಿ ಎಲ್ಲಾ ಕಡೆಗಳಲ್ಲಿ ಕೆರೆಗಳಿದ್ದವು. ನಾವುಗಳ ತಪ್ಪುಗಳಿಂದ ಪರಿಸರವನ್ನು ನಾಶಮಾಡುತ್ತಾ ಎಲ್ಲವನ್ನೂ ಆಕ್ರಮಿಸಿ ಕಟ್ಟಡ ರಚನೆ ಮಾಡುತ್ತಿದ್ದೇವೆ. ಇದರಿಂದ ಮುಂದಿನ ಪೀಳಿಗೆಗೆ ತೀರಾ ಸಮಸ್ಯೆ ಉಂಟಾಗಬಹುದು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಕಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಸಂತ ಸಾಲಿಯಾನ (ಪ್ರಾದೇಶಿಕ ನಿರ್ದೇಶಕರು ಉಡುಪಿ ಜಿಲ್ಲೆ) ಅವರು ಮಾತನಾಡುತ್ತಾ ಪೂಜ್ಯ ಖಾವಂದರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ 328 ಕೆರೆಗಳನ್ನು ಹೂಳು ತೆಗೆದು ಕೊಡಲಾಗಿದೆ. ಸುಳ್ಯ ತಾಲೂಕಿನಲ್ಲಿ ಕೊಲ್ಲಮೊಗ್ರುವಿನ ದೊಡ್ಡಣ್ಣ ಶೆಟ್ಟಿ ಪ್ರಥಮ ಕೆರೆ. ಇದು ತಾಲೂಕಿಗೆ ಮಾದರಿ ಆಗಲಿ, ಮತ್ತು ತಾಲೂಕಿನಲ್ಲಿ ಇರುವಂತಹಾ ಕೆರೆಗಳನ್ನು ಪ್ರತೀ ವರ್ಷಕ್ಕೆ ಒಂದರಂತೆ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಾದ್ಯಂತ ಭತ್ತ ಬೇಸಾಯ ಯಂತ್ರ ಕಾರ್ಯಕ್ರಮದ ಮುಖಾಂತರ ಭತ್ತ ಬೇಸಾಯಕ್ಕೆ ಆದ್ಯತೆ ನೀಡಲಾಗುವುದು ಎಂದರು.
ತಾಲೂಕು ಪಂಚಾಯತ್ ಆಧ್ಯಕ್ಷರಾದ ಚನಿಯ ಕಲ್ತಡ್ಕರವರು ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮದ ಅಭಿವೃದ್ಧಿಯ ಜೊತೆಗೆ ಕೆರೆಗಳ ಸಂರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕೊಪ್ಪಡ್ಕರವರು ಮಾತನಾಡಿ ಗ್ರಾಮ ಪಂಚಾಯತ್ ನಿಂದ ಸಂಪೂರ್ಣ ಸಹಕಾರ ನೀಡಿ ಕೆರೆಯ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಮಾಧವ ಚಾಂತಾಳರವರು ಎಲ್ಲರ ಸಹಕಾರದೊಂದಿಗೆ ತಾಲೂಕಿನ ಮಾದರಿ ಕೆರೆ ನಿರ್ಮಿಸುವ ಎಂದರು.
ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ (ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ), ಶಿವರಾಮ ಕುಂಞೇಟಿ, ಕೆ.ರವಿಚಂದ್ರ (ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೊಲ್ಲಮೊಗ್ರು), ಅಪೂರ್ವ(ಉಪ ಅರಣ್ಯಾಧಿಕಾರಿಗಳು), ಕೆ.ಪಿ.ಗಿರಿಧರ(ಜನಜಾಗೃತಿ ವೇದಿಕೆ ಸದಸ್ಯರು), ವಿನುಪ್ ಮಲ್ಲಾರ(ಅಧ್ಯಕ್ಷರು ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹರಿಹರ ಪಲ್ಲತ್ತಡ್ಕ), ಗಣೇಶ್ ಭಟ್, ಭರತ್(ಕೆರೆ ವಿಭಾಗದ ಇಂಜಿನಿಯರ್ ಕೇಂದ್ರ ಕಛೇರಿ), ಕಮಲಾಕ್ಷ ಮುಳ್ಳುಬಾಗಿಲು (ಗೆಳೆಯರ ಬಳಗದ ಅಧ್ಯಕ್ಷರು), ಗಣೇಶ ಶಿವಾಲ, ಹೇಮಂತ್ ಚಾಳೆಪಾಡಿ(ಅಧ್ಯಕ್ಷರು ಗಣೇಶೋತ್ಸವ ಸಮಿತಿ), ಸತೀಶ್.ಟಿ.ಎನ್.(ಸಂಯೋಜಕರು ವಿಪತ್ತು ನಿರ್ವಹಣಾ ಸಮಿತಿ), ಜನಾರ್ದನ (ಒಕ್ಕೂಟ ಅಧ್ಯಕ್ಷರು), ಶ್ರೀಮತಿ ಮೋಹಿನಿ ಕಟ್ಟ, ಶ್ರೀಮತಿ ಯಶೋಧ ಅಂಬೆಕಲ್ಲು, ಮಹೇಶ್ ರೈ ಮೇನಾಲ(ನಿಕಟಪೂರ್ವ ಅಧ್ಯಕ್ಷರು ಜನಜಾಗೃತಿ ವೇದಿಕೆ ಸುಳ್ಯ), ಶಿವಪ್ರಸಾದ್ ಮಾದನಮನೆ(ಕೋಶಾಧಿಕಾರಿ ಜನಜಾಗೃತಿ ಸಮಿತಿ ಸುಳ್ಯ), ಹಾಗೂ ವಲಯ ಒಕ್ಕೂಟದ ಅಧ್ಯಕ್ಷರುಗಳು, ಕೆರೆ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಸ್ವಾಗತಿಸಿ, ಹರಿಪ್ರಸಾದ್ ಮಲ್ಲಾಜೆ ವಂದಿಸಿದರು, ವಲಯ ಮೇಲ್ವಿಚಾರಕರಾದ ಸೀತಾರಾಮ ಕಾರ್ಯಕ್ರಮ ನಿರೂಪಿಸಿದರು.
✍ವರದಿ:-ಉಲ್ಲಾಸ್ ಕಜ್ಜೋಡಿ