
ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನ ಆಸ್ಪತ್ರೆಯಲಿ ಮೃತಪಟ್ಟ ಘಟನೆ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಯಿಂದ ವರದಿಯಾಗಿದೆ.
ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಈಶ್ವರ ಎಂಬವರ ಪುತ್ರಿ ಯಶಸ್ವಿ ಮೃತ ದುರ್ದೈವಿ ಈಕೆ ಕಳೆದ ಶುಕ್ರವಾರ ಅಂಗಡಿಯೊಂದರಿಂದ ಇಲಿಪಾಷಾಣ ಖರೀದಿಸಿ ಸೇವಿಸಿ ಶಾಲೆಗೆ ತೆರಳಿದ್ದಳೆನ್ನಲಾಗಿದೆ. ಶಾಲೆಯಲ್ಲಿ ವಾಂತಿ ಮಾಡಿ ಅಸ್ವಸ್ಥಗೊಂಡಾಗ ಶಿಕ್ಷಕರು ಉಪಚರಿಸಿ ಮನೆಗೆ ಕಳುಹಿಸಿದ್ದರು. ಬಳಿಕ ಅಸೌಖ್ಯ ಉಲ್ಬಣಗೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೇ ಆಕೆ ಕೊನೆಯುಸಿರೆಳೆದಳೆಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿನಿ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾಳೆ.