ದೇವಚಳ್ಳ ಗ್ರಾಮದ ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಮಾ.10 ಧ್ವಜಾರೋಹಣ ನೆರವೇರಿತು. ಮಾ.14 ರಂದು ಬೆಳಿಗ್ಗೆ ಮುಂಡೋಡಿ ತರವಾಡು ಮನೆಯಿಂದ ಮತ್ತು ರುದ್ರಚಾಮುಂಡಿ ದೈವಸ್ಥಾನದಿಂದ ದೈವಗಳ ಭಂಡಾರ ಬರುವುದು, ರಾತ್ರಿ ಉಗ್ರಾಣ ತುಂಬಿಸುವುದು, ಅನ್ನಸಂತರ್ಪಣೆ, ರಾತ್ರಿ ಗಂಟೆ 9ಕ್ಕೆ ತಳೂರಿನಿಂದ ಶ್ರೀ ದೈವಗಳ ಭಂಡಾರ ಬರುವುದು, ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ದೈವಗಳ ಭಂಡಾರ ಹೊರಡುವುದು. ಮಾ.15ರಂದು ಬೆಳಿಗ್ಗೆ ಗಂಟೆ 2 ಕ್ಕೆ ಶ್ರೀ ರಾಜ್ಯದೈವದ ನೇಮ, ಬೆಳಿಗ್ಗೆ 9.00 ರಿಂದ ರುದ್ರಚಾಮುಂಡಿ, ಪುರುಷ ದೈವ, ಪಂಜುರ್ಲಿ ದೈವದ ನೇಮ ನಡೆಯಲಿದೆ. ಮಾ.14 ರಂದು ರಾತ್ರಿ ಗಂಟೆ 7 ರಿಂದ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ವೈಭವ, ಬಳಿಕ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಹಾಗೂ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅಭಿನಯದ, ಲಕುಮಿ ತಂಡದ ಕಲಾವಿದರು ಅಭಿನಯಿಸಿಸುವ “ಎನ್ನ ಬಂಙ ಎಂಕೇ ಗೊತ್ತು” ತುಳು ಹಾಸ್ಯಮಯ ನಾಟಕ ನಡೆಯಲಿದೆ.
- Saturday
- November 23rd, 2024