Ad Widget

ದೇಶದ್ರೋಹಿ ಹೇಳಿಕೆಗೆ ಎಬಿವಿಪಿ ಖಂಡನೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ದೇಶದ್ರೋಹಿ ಸಂಘಟನೆ ಎಂದು ಹೇಳಿರುವ ಹೇಳಿಕೆ ನೀಡಿರುವ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರಾದ ಸವಾದ್ ಸುಳ್ಯ ಹೇಳಿಕೆಯನ್ನು ಹಿಂಪಡೆಯಬೇಕು. ಹಾಗೂ ವಿದ್ಯಾರ್ಥಿಗಳಿಗೆ ಅಸ್ಪಷ್ಟ ಮಾಹಿತಿ ನೀಡಿ ಕ್ಯಾಂಪಸ್ ಗೇಟ್ ಮೀಟ್ ನಡೆಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಪೋಸ್ಟರ್ ಹಿಡಿದು ಎನ್ ಎಸ್ ಯು ಐ ಕಾರ್ಯಕರ್ತರ ಜತೆ ಫೋಟೊಕ್ಕೆ ಪೋಸ್ ನೀಡಿದ ಅದೆಷ್ಟೋ ವಿದ್ಯಾರ್ಥಿಗಳಿಗೆ ತಾವೇಕೆ ಅದರಲ್ಲಿ ಪಾಲ್ಗೊಂಡಿದ್ದೇವೆಂದು ಇನ್ನೂ ಅರಿವೇ ಇಲ್ಲ. ಅಸ್ಪಷ್ಟ ಮಾಹಿತಿಯೊಂದಿಗೆ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವುದನ್ನು ಎಬಿವಿಪಿ ಖಂಡಿಸುತ್ತದೆ. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರೋಪಾಯ ಒದಗಿಸುವುದರಲ್ಲಿ ತಪ್ಪಿಲ್ಲ‌, ಆದರೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಿ ಪೋಸ್ಟರ್ ಹಿಡಿಸುವುದು ಖಂಡನೀಯ ವಿಚಾರ ಎಂದು ಎಬಿವಿಪಿ ಕಾರ್ಯದರ್ಶಿ ಚರಣ್ ರಾಜ್ ಅಡ್ಕಬಳೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!