
ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1994ರಲ್ಲಿ ಮದ್ಯದಂಗಡಿ ವಿರೋಧಿ ಚಳುವಳಿ ಪ್ರಾರಂಭಗೊಂಡು ಸರ್ಕಾರದ ಪರವಾನಗಿ ಹೊಂದಿದ್ದ ಶರಾಬು ಅಂಗಡಿ ನಾಗರಿಕರ ಹೋರಾಟದ ಫಲವಾಗಿ 1994 ಜುಲೈ ತಿಂಗಳಿನಿಂದ ತೆರವುಗೊಂಡಿರುತ್ತದೆ. ಅಲ್ಲಿಂದ ಇದುವರೆಗೆ ಗ್ರಾಮದ ನಾಗರಿಕರು ನೆಮ್ಮದಿ ಹಾಗೂ ಶಾಂತಿಯುತ ಮತ್ತು ಅಭಿವೃದ್ಧಿಶೀಲ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಈಗ ಪುನಃ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆದಿದೆ ಎನ್ನಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ತೆರೆಯುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹರಿಹರ ಪಲ್ಲತ್ತಡ್ಕದ ಒಕ್ಕೂಟದ ಸರ್ವಸದಸ್ಯರ ವಿರೋಧ ವ್ಯಕ್ತಪಡಿಸಿ, ಸಹಿ ಸಂಗ್ರಹಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾ.8ರಂದು ಮನವಿ ಸಲ್ಲಿಸಿದ್ದಾರೆ.