
ಸ್ನೇಹ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಎಡಮಂಗಲ ಇದರ ಚೆಕ್ ವಿತರಣಾ ಕಾರ್ಯಕ್ರಮ ಮಾ.9ರಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸುಳ್ಯ ತಾ.ಪಂ ಅಧಿಕಾರಿ ಮಹೇಶ್ ಸಂಘದ ಸದಸ್ಯರಿಗೆ ಚಕ್ ವಿತರಿಸಿದರು. ಸಂಘದ ಎಂ.ಬಿ.ಕೆ. ಆಶಾದೀಪ ಎಡಮಂಗಲ, ಎಲ್.ಸಿ.ಆರ್.ಪಿ.ಪುಷ್ಪಾವತಿ ಮರ್ದೂರು,ಬೇಬಿ ಕೇರ್ಪಡ ಹಾಗೂ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.