ಕೋವಿಡ್ -19 ವೈರಾಣುವಿನ ವಿರುದ್ದ ಈಗಾಗಲೇ ದೇಶಾದ್ಯಂತ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ನೀಡಲಾಗಿದೆ. ಮುಂದುವರೆದು ಈಗ ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ 60 ವರ್ಷ ದಾಟಿದ ವಯಸ್ಕರಿಗೆ ಮತ್ತು 45-59 ವರ್ಷ ವಯೋಮಾನದ ಬಿಪಿ, ಶುಗರ್,ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ತೊಂದರೆ ಇರುವವರಿಗೆ ಮೊದಲ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ವಾರದ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಬೆಳ್ಳಾರೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ಸದ್ರಿ ಲಸಿಕೆ ಪಡೆಯಲು ಬರುವಾಗ ಯಾವುದಾದರೊಂದು ಗುರುತಿನ ಚೀಟಿ ತರುವಂತೆ ಸೂಚಿಸಲಾಗಿದೆ. 45-59 ವಯೋಮಾನದ ವ್ಯಕ್ತಿಗಳು ಲಸಿಕೆಗೆ ಬರುವಾಗ ತಾವು ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಬಗ್ಗೆ ವೈದ್ಯರಿಂದ ದೃಢೀಕರಣ ಪಡೆದುಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ. ಸಾರ್ವಜನಿಕರು ಅತ್ಯಧಿಕ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಬೇಬಿ ಕೆ ಸಿ, ಕಿರಿಯ ಆರೋಗ್ಯ ಸಹಾಯಕಿ ಇವರನ್ನು ಸಂಪರ್ಕಿಸುವಂತೆ ಈ ಮೂಲಕ ತಿಳಿಸಿದೆ.
ಮೊ :9686916963