
ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಾ. 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಅಂಗನವಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸುಮತಿ ಹಾಗೂ ಇನ್ನರ್ ವಿಲ್ ಕ್ಲಬ್ ಮತ್ತು ಸಮಾಜ ಸೇವೆ ಯಲ್ಲಿ ತೊಡಗಿಕೊಂಡಿರುವ ಶ್ರೀಮತಿ ಲತಾ ಕೇರ್ಪಳ ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಬೂಡು ಅಂಗನವಾಡಿ ಕೇಂದ್ರ ದಲ್ಲಿ ಸನ್ಮಾನಿಸಲಾಯಿತು. ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕರ್,ವಿಜಯ ಕರ್ನಾಟಕ ಜೋಡಿ ತಾರೆ ವಿಜೇತರಾದ ಕೃಷ್ಣರಾಜ್ ಹಾಗೂ ಪೂರ್ಣಿಮಾ ಕೃಷ್ಣರಾಜ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸುಪ್ರೀತ್ ಮೋಂಟಡ್ಕ, ಮಂಜು ಮೇಸ್ತ್ರಿ ಕೇರ್ಪಳ, ಶಾಫಿ ಕುತ್ತಮೊಟ್ಟೆ, ಸಂಜೀವ ಟೈಲರ್ ಕೇರ್ಪಳ, ಸಾನ್ವಿ ಪಿ.ಎನ್., ಅಂಗನವಾಡಿ ಟೀಚರ್ ಕವಿತಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕವಿತಾ ಸ್ವಾಗತಿಸಿ, ರಿಯಾಜ್ ಕಟ್ಟೆಕಾರ್ ವಂದಿಸಿದರು.