ಎಡಮಂಗಲದಲ್ಲಿ ದಲಿತ ಮಹಿಳೆಯ ಮನೆ ಧ್ವಂಸ ಮಾಡಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಬೆಳ್ಳಾರೆ ಎಸ್ ಪಿ ಯವರಿಗೆ ದೂರು ನೀಡಿದ್ದು , ಶೀಘ್ರ ಆರೋಪಿಗಳ ಬಂಧನ ಮಾಡದಿದ್ದರೆ ಬೆಳ್ಳಾರೆ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಎಡಮಂಗಲ ಗ್ರಾಮದ ಕಜೆತ್ತಡ್ಕದ ಬಾಲಕಿ ಎಂಬವರ ಮನೆಯನ್ನು ಧ್ವಂಸ ಮಾಡಲಾಗಿದ್ದು ಘಟನೆಗೆ ಸಂಬಂಧಿಸಿ ರವಿ ಸಹಿತ ನಾಲ್ವರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಎಫ್. ಐ.ಆರ್ ದಾಖಲಾಗಿತ್ತು. ಜಾತಿ ನಿಂದನೆ ಮತ್ತು ದೈಹಿಕ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡಿರುವುದರ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು. ಆದರೇ ಎಫ್.ಐ ಆರ್ ದಾಖಲಾಗಿ ಐದು ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಶೀಘ್ರ ಬಂಧಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಜಿಲ್ಲಾ ಎಸ್ ಪಿ ಯವರಿಗೆ ಮಾ.8 ರಂದು ದೂರ ಸಲ್ಲಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಶಾಂತಿಮೂಲೆ ಉಪಸ್ಥಿತರಿದ್ದರು.