ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಕಚೇರಿಗೆ ಸರಕಾರದ ಆದೇಶದಂತೆ 14ನೇ ಹಣಕಾಸು ಮತ್ತು 15ನೇ ಹಣಕಾಸು ಅನುದಾನದಲ್ಲಿ ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ ಸಂಸ್ಥೆಯ ಮುಖಾಂತರ 3 ಕಿಲೋ ವ್ಯಾಟ್ ಸಾಮರ್ಥ್ಯದ Grid Interactive Hybrid Solar Rooftop Power Plants (ಸೋಲಾರ್ ಸಿಸ್ಟಮ್)ಗಳನ್ನು ಸುಳ್ಯ ತಾಲೂಕು ಪಂಚಾಯತ್ ಗೆ ಸಂಬಂದಪಟ್ಟಂತೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪ್ರಥಮವಾಗಿ ಅಳವಡಿಲಾಯಿತು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಂತದಲ್ಲಿ ಪ್ರಥಮವಾಗಿ ಅದರ ಉದ್ಘಾಟನಾ ಕಾರ್ಯಕ್ರಮವನ್ನು ನೆರೆವೇರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಿತ್ರಕುಮಾರಿ ಪಾಲಡ್ಕ ಇವರು ನೆರವೇರಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಸೋಲಾರ್ ಪವರ್ ಪ್ಲಾಂಟ್ ಅಳವಡಿಕೆಯ ಮೇಲ್ವಿಚಾರಣಾ ತಾಲೂಕು ನೋಡೆಲ್ ಅಧಿಕಾರಿಯವರಾದ ಶ್ರೀ ಭವಾನಿಶಂಕರ್ ಎನ್ ಇವರು ಸ್ವಿಚ್ ಆನ್ ಮಾಡುವುದರ ಮೂಲಕ ಸೋಲಾರ್ ಸಿಸ್ಟಮ್ ಗೆ ಪ್ರಾಯೋಗಿಕ ಚಾಲನೆಯನ್ನು ನೀಡಿದರು. ಮಾನ್ಯ ಕಾರ್ಯನಿರ್ವಹಣಾಧಿಕಾರಿಯವರ ಸಮ್ಮುಖದಲ್ಲಿ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇವರಿಗೆ ಸೋಲಾರ್ ಸಿಸ್ಟಮ್ ನ ದಾಖಲೆ ಪತ್ರಗಳನ್ನು ಸಹಾಯಕ ಮ್ಯಾನೇಜರ್ ಶ್ರೀ ಸಚಿನ್ ಜಿ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಉಬರಡ್ಕ, ಶ್ರೀ ಅನಿಲ್ ಕುಮಾರ್ ಬಳ್ಳಡ್ಕ, ಶ್ರೀ ಪ್ರಶಾಂತ ಪಾನತ್ತಿಲ, ಶ್ರೀಮತಿ ಪೂರ್ಣಿಮಾ ಸೂಂತೋಡು, ಶ್ರೀಮತಿ ವಸಂತಿ ಕಲ್ಚಾರು, ಸಂಜೀವಿನ ಸಂಘದ ಎಂಬಿಕೆ ಆದ ಶ್ರೀಮತಿ ನಳಿನಾಕ್ಷಿ ಉಬರಡ್ಕ, ಸಂಘದ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ವಿದ್ಯಾಧರ ಕೆ ಎನ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೋಲಾರ್ ಸಿಸ್ಟಮ್ ನ ಕುರಿತು ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ ಸಂಸ್ಥೆಯ ಸಹಾಯಕ ಮ್ಯಾನೇಜರ್ ಆದ ಶ್ರೀ ಸಚಿನ್ ಜಿ ಮತ್ತು ಇಂಜಿನೀಯರ್ ರವರಾದ ಶ್ರೀ ಮನೋಜ್ ಕುಮಾರ್ ಎ ಎನ್ ಇವರು ಮಾಹಿತಿಯನ್ನು ನೀಡಿದರು.
- Thursday
- November 21st, 2024