
ಗರ್ಭಿಣಿ ತಾಯಂದಿರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಶೇಣಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಅಶೋಕ ಚೂಂತಾರು, ಸೀತಾ ಹೆಚ್. ಮೀನಾಕ್ಷಿ ಚೂಂತಾರು ನಿವೃತ ಫಾರೆಸ್ಟರ್ ಗುಡ್ಡಪ್ಪ ಗೌಡ ದೇರಾಜೆ, ಆಶಾ ಕಾರ್ಯಕರ್ತೆ ರತ್ನವತಿ ಶೇಣಿ, ಅಂಗನವಾಡಿ ಕಾರ್ಯಕರ್ತೆ ಧರ್ಮಾವತಿ ದೇರಾಜೆ, ಸಹಾಯಕಿ ಗೀತಾಕುಮಾರಿ ಉಪಸ್ಥಿತರಿದ್ದರು. ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.


