Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಸರ್ಕಾರ ಬಿಡುಗಡೆ ಮಾಡಿದೆ.

. . . . . . .

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಈ ಹಿಂದೆ ಸರಕಾರ ನೇಮಿಸಿದ್ದ
ಅಭಿವೃದ್ಧಿ ಸಮಿತಿಯ ಕೆಲ ಸದಸ್ಯರನ್ನು ಉಳಿಸಿಕೊಂಡು ಹೊಸದಾಗಿ ನಾಲ್ಕು ಮಂದಿ ಸದಸ್ಯರ ಸೇರ್ಪಡೆಗೊಳಿಸಿ 9 ಮಂದಿಯ ವ್ಯವಸ್ಥಾಪನ ಸಮಿತಿ ರಚಿಸಿ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮಾ.5 ರಂದು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ 6 ಜನರ ಅಭಿವೃದ್ಧಿ ಸಮಿತಿ ರಚನೆಯಾಗಿತ್ತು. ಮುಂದಿನ 3 ವರ್ಷಗಳ ಅವಧಿಗೆಂದು ಈ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಪಿ.ಜಿ.ಎಸ್.ಪ್ರಸಾದ್, ಪ್ರಸನ್ನ, ಎಸ್.ಮೋಹನ್ ರಾಮ್, ವನಜಾ ಭಟ್.ಮನೋಹರ ರೈ, ಸಮಿತಿ ಸದಸ್ಯರಾಗಿದ್ದರು. ಶಾಸಕ ಎಸ್ ಅಂಗಾರ ಅಧ್ಯಕ್ಷರಾಗಿದ್ದರು.


ನೂತನ ಸಮಿತಿ ರಚನೆಯಾಗಿದ್ದು ಇದರಲ್ಲಿ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ, ಬಾಳುಗೋಡಿನ ಲೊಕೇಶ್ ಮುಂಡೊಕಜೆ, ಸುಬ್ರಹ್ಮಣ್ಯದ ವನಜ ವಿ ಭಟ್, ಸುಬ್ರಹ್ಮಣ್ಯ ಪರ್ವತಮುಖಿಯ ಶೋಭಾ ಗಿರಿಧರ್ ಸ್ಕಂದ, ನೆಲ್ಲೂರು ಕೆಮ್ರಾಜೆಯ ಮೋಹನ ರಾಮ್ ಸುಳ್ಳಿ, ಕಡಬ ಬಂಟ್ರ ಗ್ರಾಮದ ಅಳಿಮಾರು ಪಟ್ಟೆಮನೆ ಮನೋಹರ ರೈ, ಕಳಂಜ ದ ಪಿ.ಜಿ.ಎಸ್.ಎನ್ ಪ್ರಸಾದ್, ಬೆಳ್ತಂಗಡಿ ತಣ್ಣೀರುಪಂತ ದ ಪ್ರಸನ್ನ ದರ್ಬೆ, ಬೆಂಗಳೂರು ಮಂಜುನಾಥ ನಗರದ ಶ್ರೀವತ್ಸ ಇವರನ್ನು ಸರಕಾರ ನೇಮಕಗೊಳಿಸಿದೆ.
ಈ ಹಿಂದೆ ಸರಕಾರ ರಚಿಸಿದ ಮೂರು ವರ್ಷಗಳ ಅವಧಿಯ ಅಭಿವೃದ್ಧಿ ಸಮಿತಿ ಬದಲಿಗೆ ಪೂರ್ಣಾವಧಿ ವ್ಯವಸ್ಥಾಪನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!