
ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಇಂದು ಕೋಟೆಮುಂಡುಗಾರು ಹಿ. ಪ್ರಾ. ಶಾಲೆಯಲ್ಲಿ ಜರುಗಿತು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬೇಬಿ ಕೆ. ಸಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಂತಿ, ಶ್ರೀಮತಿ ಶೇಷಮ್ಮ, ಅಂ. ಕಾರ್ಯಕರ್ತೆ ಕು. ದೀಪ್ತಿ ಇವರುಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

