
ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ಮತ್ತು ಶಿಶು ಕಲ್ಯಾಣ ಇಲಾಖೆಯ ವತಿಯಿಂದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಾಹಿತಿ ಶಿಬಿರ ನಡೆಯಿತು. ಶಿಬಿರದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಜಯಮಣಿ ಮಾಧವ ವಹಿಸಿದ್ದರು. ಇಲಾಖೆಯ ಅಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ದೀಪ ಬೆಳಗಿಸಿದರು. ಡಾ.ವೀಣಾ ಪಾಲಚಂದ್ರ ಕಿಶೋರಿಯವರಿಗೆ ಯೌವನಾವಸ್ಥೆಯಲ್ಲಿ ಬೇಕಾದ ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಅಂಗನವಾಡಿ ಗೆ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು. ಅಂಗನವಾಡಿ ಶಿಕ್ಷಕಿ ಶೋಭ, ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ, ಜೆ ಕೆ.ರೈ, ಶಶಿಕಲಾ ಹರಪ್ರಸಾದ್, ಪೂಜಾ ಸಂತೋಷ್, ವಿನುತಾಶೇಟ್, ಜಯಲಕ್ಷ್ಮೀ ಜೆ.ಕೆ.ರೈ, ಗೀತಾ, ಹರ್ಷಿತಾ ಉಪಸ್ಥಿತರಿದ್ದರು. ಜಯಮಣಿ ಸ್ವಾಗತಿಸಿ, ಶೋಭ ವಂದಿಸಿದರು.ಯೋಗಿತಾ ಗೋಪಿನಾಥ್ ಕಾರ್ಯಕ್ರಮ ನಿರೂಪಿಸಿದರು.