ಭಾವೈಕ್ಯ ಯುವಕ ಮಂಡಲ (ರಿ)ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ ಮತ್ತು ಗ್ರಾಮ ಪಂಚಾಯತ್ ಪೆರುವಾಜೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಸಾರ್ವಜನಿಕ ಆಧಾರ್ ಕಾರ್ಡ್ ಮೇಳ ಕಾರ್ಯಕ್ರಮವು ಜ. 28 ರಂದು ಗ್ರಾಮ ಪಂಚಾಯತ್ ಪೆರುವಾಜೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಭಾವೈಕ್ಯ ಯುವಕ ಮಂಡಲ (ರಿ) ಪೆರುವಾಜೆ ಇದರ ಅಧ್ಯಕ್ಷರಾದ ವಾಸುದೇವ ಪೆರುವಾಜೆ ವಹಿಸಿದ್ದರು. ಕಾರ್ಯಕ್ರಮವನ್ನು ಪೆರುವಾಜೆ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಅಲೆಕ್ಕಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಉಪವಿಭಾಗದ ಅಂಚೆ ನಿರೀಕ್ಷಕರಾದ ಸುದೀಪ್ ಕುಮಾರ್ ಬಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಭಾವೈಕ್ಯ ಯುವಕ ಮಂಡಲ ಹಾಗೂ ಭಾವೈಕ್ಯ ಮಹಿಳಾ ಮಂಡಲದ ಸದಸ್ಯರು, ಗ್ರಾಮ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸನತ್ ಪೆರುವಾಜೆ ನಿರೂಪಿಸಿ,ಚೇತನ್ ಕೊಡಿಯಾಲ ಸ್ವಾಗತಿಸಿ, ದೀಕ್ಷಿತ್ ಪೆರುವಾಜೆ ವಂದಿಸಿದರು.