ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷತೆಯ ಸ್ಥಾನಗಳಿಗೆ ಜ.27 ರಂದು ಪುತ್ತೂರಿನ ಪುರಭವನದಲ್ಲಿ ನಡೆದ ಮೀಸಲಾತಿ ಪ್ರಕ್ರಿಯೆಯಲ್ಲಿ ಘೋಷಿಸಲಾಗಿದೆ. ಬೆಳ್ಳಾರೆಯಲ್ಲಿ ಅಧ್ಯಕ್ಷತೆ ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ ಎಸ್ ಟಿ, ಪೆರುವಾಜೆಯಲ್ಲಿ ಅಧ್ಯಕ್ಷತೆ ಹಿಂದುಳಿದ ವರ್ಗ ಎ, ಉಪಾಧ್ಯಕ್ಷತೆ ಎಸ್ ಸಿ ಮಹಿಳೆ, ಸಂಪಾಜೆಯಲ್ಲಿ ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ ಮಹಿಳೆ, ಅಜ್ಜಾವರದಲ್ಲಿ ಹಿಂದುಳಿದ ವರ್ಗ ಎ ಮಹಿಳೆ ಮತ್ತು ಸಾಮಾನ್ಯ ಮಹಿಳೆ, ಗುತ್ತಿಗಾರು ಹಿಂದುಳಿದ ವರ್ಗ ಎ ಮಹಿಳೆ ಮತ್ತು ಸಾಮಾನ್ಯ ಮಹಿಳೆ, ಕಲ್ಮಡ್ಕ ಹಿಂದುಳಿದ ವರ್ಗ ಎ ಮಹಿಳೆ ಮತ್ತು ಸಾಮಾನ್ಯ, ದೇವಚಳ್ಳ ಹಿಂದುಳಿದ ವರ್ಗ ಬಿ ಮಹಿಳೆ ಮತ್ತು ಎಸ್ ಸಿ, ಕೊಡಿಯಾಲ ಅಧ್ಯಕ್ಷತೆ ಹಾಗು ಉಪಾಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ, ಕಳಂಜ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸಾಮಾನ್ಯ ವರ್ಗಕ್ಕೆ, ಐವರ್ನಾಡು ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ, ಕನಕಮಜಲು ಸಾಮಾನ್ಯ ಮತ್ತು ಎಸ್ ಟಿ ಮಹಿಳೆ, ಮಡಪ್ಪಾಡಿ ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ, ಹರಿಹರ ಪಲ್ಲತ್ತಡ್ಕ ಎರಡೂ ಸಾಮಾನ್ಯ ವರ್ಗಕ್ಕೆ, ಕೊಲ್ಲಮೊಗ್ರ ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆ, ಅಮರಮುಡ್ನೂರು ಸಾಮಾನ್ಯ ಮಹಿಳೆ ಮತ್ತು ಹಿಂದುಳಿದ ವರ್ಗ ಎ, ಮಂಡೆಕೋಲು ಸಾಮಾನ್ಯ ಮಹಿಳೆ ಮತ್ತು ಹಿಂದಿಳಿದ ವರ್ಗ ಎ, ಆಲೆಟ್ಟಿ ಸಾಮಾನ್ಯ ಮಹಿಳೆ ಮತ್ತು ಹಿಂದುಳಿದ ವರ್ಗ ಎ, ಅರಂತೋಡು ಸಾಮಾನ್ಯ ಮಹಿಳೆ ಮತ್ತು ಎಸ್ ಸಿ ಮಹಿಳೆ, ಮರ್ಕಂಜ ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ, ನೆಲ್ಲೂರು ಕೆಮ್ರಾಜೆ ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ, ಜಾಲ್ಸೂರು ಎಸ್ ಸಿ ಮತ್ತು ಹಿಂದುಳಿದ ವರ್ಗ ಎ ಮಹಿಳೆ, ಐವತ್ತೊಕ್ಲು(ಪಂಜ) ಎಸ್ ಸಿ ಮಹಿಳೆ ಮತ್ತು ಸಾಮಾನ್ಯ ಮಹಿಳೆ, ಮುರುಳ್ಯ ಎಸ್ ಸಿ ಮಹಿಳೆ ಹಿಂದುಳಿದ ವರ್ಗ ಎ ಮಹಿಳೆ, ಬಾಳಿಲ ಎಸ್ ಟಿ ಮತ್ತು ಹಿಂದುಳಿದ ವರ್ಗ ಎ ಮಹಿಳೆ, ಉಬರಡ್ಕ ಮಿತ್ತೂರು ಎಸ್ ಟಿ ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 30 ತಿಂಗಳ ಅಧಿಕಾರಾವಧಿಗೆ ಅಧ್ಯಕ್ಷ-ಉಪಾಧ್ಯಕ್ಷರುಗಳು ಆಯ್ಕೆಯಾಗಲಿದ್ದಾರೆ. ಎರಡುವರೆ ವರ್ಷದ ಬಳಿಕ ಮತ್ತೆ ಪುನಃ ಹೊಸ ಮೀಸಲಾತಿ ಘೋಷಣೆಯಾಗಲಿದೆ. ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದ್ದು 25 ರಲ್ಲಿ 13 ಕಡೆ ಮಹಿಳಾ ಅಧ್ಯಕ್ಷ, ಉಪಾಧ್ಯಕರು ಇರಲಿದ್ದಾರೆ. ಸಾಮಾನ್ಯ ವರ್ಗಕ್ಕೆ 13 ಕಡೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ದೊರೆಯಲಿದ್ದು ಇದರಲ್ಲಿ 6 ಮಹಿಳಾ ಮೀಸಲಾತಿ ಇರಲಿದೆ. ಅನುಸೂಚಿತ ಜಾತಿಗೆ 3 ಕಡೆ ಅಧ್ಯಕ್ಷ, ಉಪಾಧ್ಯಕ್ಷತೆ ದೊರೆಯಲಿದ್ದು ಇದರಲ್ಲಿ ಇಬ್ಬರು ಮಹಿಳಾ ಮೀಸಲಾತಿ. ಅನುಸೂಚಿತ ಪಂಗಡಕ್ಕೆ ಎರಡು ಸ್ಥಾನವಿದ್ದು ಒಂದು ಮಹಿಳಾ ಮೀಸಲಾತಿ. ಹಿಂದುಳಿದ ಅ ವರ್ಗಕ್ಕೆ 6 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವಿದ್ದು ಮೂರು ಮಹಿಳಾ ಮೀಸಲಾತಿ, ಹಿಂದುಳಿದ ವರ್ಗ ಬಿ ವರ್ಗಕ್ಕೆ ಒಂದು ಸ್ಥಾನವಿದ್ದು ಮಹಿಳೆಗೆ ಮೀಸಲಿರಿಸಲಾಗಿದೆ.
- Thursday
- November 21st, 2024