Ad Widget

ಪೆರುವಾಜೆ : ಬೀಳುವ ಸ್ಥಿತಿಯಲ್ಲಿದ್ದ ಮನೆ ದುರಸ್ತಿಗೊಳಿಸಿದ ಯುವಸೇನೆ ಮುಕ್ಕೂರು ಸದಸ್ಯರು

ಪೆರುವಾಜೆ ಗ್ರಾಮದ ಮುಕ್ಕೂರು ಬಿರುಸಾಗು ನಿವಾಸಿ ಮಾಧವಿ ರೈ ಯವರು ಮನೆಯ ಮೇಲ್ಛಾವಣಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸುವಂತಿತ್ತು. ಈ ವಿಷಯ ಮನಗಂಡ ಯುವಸೇನೆ ಮುಕ್ಕೂರು ಪೆರುವಾಜೆಯ ಸದಸ್ಯರು ಬೀಳುವ ಸ್ಥಿತಿಯಲ್ಲಿದ್ದ ಮನೆಯ ದುರಸ್ತಿ ಕಾರ್ಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

. . . . . . . . .


ಕ್ಯಾನ್ಸರ್ ನಿಂದ ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಮಾಧವಿ ರೈ ಯವರು ಒಬ್ಬಂಟಿಯಾಗಿ ತೀರಾ ಬಡತನದಿಂದ ಜೀವನ ನಿರ್ವಹಿಸುತ್ತಿದ್ದರು. ಇದೇ ವೇಳೆ ಮನೆಯ ಮೇಲ್ಛಾವಣಿ ಶಿಥಿಲಗೊಂಡು ಆತಂಕದಿಂದ ದಿನದೂಡುವಂತಾಗಿತ್ತು. ಇದೀಗ ಮುಕ್ಕೂರು ಯುವಸೇನೆಯ ಸದಸ್ಯರು ಕೆಲವೇ ದಿನಗಳಲ್ಲಿ ದುರಸ್ತಿಗೊಳಿಸಿದ್ದು, ಈ ಸ್ಪಂದನೀಯ ಕಾರ್ಯ ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading