
ಅಚ್ರಪ್ಪಾಡಿ ಶಾಲೆಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಇವರು ಮೊದಲಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಂದ ರಚಿತವಾದ ಸಂವಿಧಾನದಲ್ಲಿ ನಮ್ಮ ಬದುಕು ಅದರಿಂದ ಸಂವಿಧಾನ ಶಿಲ್ಪಿಯ ಸ್ಮರಣೆ ಮುಖ್ಯವಾಗಿದೆ ಎಂದು ಸಂವಿಧಾನದ ಕುರಿತಾಗಿ ಮಾತನಾಡಿ ಶುಭಕೋರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಕಡಪಳ ಧ್ವಜಾರೋಹಣ ನೆರೆವೇರಿಸಿ ಎಲ್ಲರಿಗೂ ಶುಭಕೋರಿದರು. ವಾಟ್ಸ್ ಆಪ್ ಮೂಲಕ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ನಿಕಟಪೂರ್ವ ಶಾಲಾ ಅಭಿವೃದ್ಧಿ ಅಧ್ಯಕ್ಷೆ ಶ್ರೀಮತಿ ನಿರ್ಮಲ ಹರಿಶ್ಚಂದ್ರ, ಊರ ಹಿರಿಯರಾದ ದಾಮೋದರ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಶ್ವೇತಾ ವೇಣುಗೋಪಾಲ್ ಮುಖ್ಯಶಿಕ್ಷಕಿ ಸ್ವಾಗತಿಸಿದರು. ಶಾಲೆಯ ಸಹಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ನಿರೂಪಿಸಿ, ವಂದಿಸಿದರು.