ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟನೆ ಇಂದು ನಡೆಯಿತು. ಪಿಡಿಓ ಶ್ಯಾಮ್ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ಪ್ರಾ.ಆ. ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ನಂದಕುಮಾರ್ ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಗುತ್ತಿಗಾರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತ್ರಭಾನು ಕೆ.ಎಸ್. ಉಪಸ್ಥಿತರಿದ್ದರು. ಪ್ರಥಮವಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾದ ಸೀತಮ್ಮ ಪಿ. ಯವರಿಗೆ ಲಸಿಕೆ ನೀಡುವ ಮುಖಾಂತರ ಚಾಲನೆ ನೀಡಲಾಯಿತು. ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ವ್ಯಾಕ್ಸಿನೇಟರ್ ಗಳಾಗಿ ಶ್ರೀಮತಿ ಜಯಶ್ರೀ ಕೆ.ವಿ., ಕಿ.ಮ.ಆ.ಸಹಾಯಕಿ ಶ್ರೀಮತಿ ಲಲಿತಾ, ಶ್ರೀಮತಿ ಸುನೀತಾ ಕೆ.ಎಂ.,ಸವಿತಾ ಹಾಗೂ ಆಶಾ ಕಾರ್ಯಕರ್ತೆಯಾದ ಕುಸುಮಾವತಿ ಸಹಕರಿಸಿದರು. ಕಿ.ಮ.ಆ.ಸಹಾಯಕಿ ಶ್ರೀಮತಿ ರೇವತಿ ಕೆ. ಕಾರ್ಯಕ್ರಮ ನಿರೂಪಿಸಿದರು.
- Friday
- November 22nd, 2024