ಸುಬ್ರಹ್ಮಣ್ಯದ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ವಾರ್ಷಿಕ ಸಭೆ ರವೀಂದ್ರ ರುದ್ರಪಾದ ರವರ ಅಧ್ಯಕ್ಷತೆಯಲ್ಲಿ ಕುಲ್ಕುಂದ ದೈವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂಬರುವ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಾರ್ಷಿಕ ಒತ್ತೆಕೋಲ ಮತ್ತು ನೇಮೋತ್ಸವಗಳ ಆಮಂತ್ರಣ ಪತ್ರಿಕೆಯನ್ನು ದೈವದ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವೆಂಕಟ್ರಾಜ್,ಚಂದ್ರಹಾಸ ಭಟ್, ಹರೀಶ ಇಂಜಾಡಿ, ದುಗ್ಗಪ್ಪ ನಾಯ್ಕ, ರಾಜೇಶ ಎನ್.ಎಸ್., ರವಿ ಕಕ್ಕೆಪದವು, ರಾಜೇಶ್ ಕಾಶಿಕಟ್ಟೆ, ರಾಜೇಶ ಕುದುರೆಮಜಲು, ನವೀನ ಮಣಿ, ಸುರೇಶ ಉಜಿರಡ್ಕ, ರಾಮಚಂದ್ರ ಮಣಿಯಾಣಿ, ಸುಬ್ರಹ್ಮಣ್ಯ ಆರ್.,ಗೋಪಾಲ ಮಲೆ, ಗಿರಿಧರ ಸ್ಕಂದ, ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.
- Thursday
- November 21st, 2024