

ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್. ಅಂಗಾರರವರು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಣ್ಣಾ ವಿನಯಚಂದ್ರರು ನೂತನ ಸಚಿವರನ್ನು ಸ್ವಾಗತಿಸಿ, ಅಭಿನಂದಿಸಿದರು. ಈ ವೇಳೆ ತಾ.ಪಂ. ಸದಸ್ಯೆ ಶ್ರೀಮತಿ ಜಾಹ್ನವಿ ಕಾಂಚೋಡು, ಕಳಂಜ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಕುಮಾರ್ ಕಿಲಂಗೋಡಿ ಹಾಗೂ ಬಾಲಕೃಷ್ಣ ಬೇರಿಕೆ, ಅಜಿತ್ ರಾವ್ ಕಿಲಂಗೋಡಿ, ಬಾಳಪ್ಪ ಮಣಿಮಜಲು, ವಾಸುದೇವ ಆಚಾರ್ಯ ಕಿಲಂಗೋಡಿ, ಗಣೇಶ್ ಮುದ್ದಾಜೆ, ಪುರುಷೋತ್ತಮ ಕಲ್ಲೇರಿ, ಮೋನಪ್ಪ ಕೋಡಿಯಡ್ಕ ಹಾಗೂ ಪ್ರಮುಖರು ಉಪಸ್ಥಿತರಿದ್ದರು.