Ad Widget

ಸುಳ್ಯ : ವಿಶೇಷ ಕಾರ್ಯಾಗಾರ ಮತ್ತು ಯೋಗ ಪ್ರದರ್ಶನ

ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ಮಂಗಳೂರು ವಿಭಾಗ, ಸುಳ್ಯ ನಗರ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಗಾರ ಮತ್ತು ಯೋಗ ಪ್ರದರ್ಶನವು ಸುಳ್ಯದ ಶಿವಕೃಪಾ ಕಲಾ ಮಂದಿರ ನಡೆಯಿತು. ಕಾರ್ಯಕ್ರಮವನ್ನು ಸುಳ್ಯದ ಆನಂದ್ ಇಲೆಕ್ಟ್ರಿಕಲ್ಸ್ ನ ಮಾಲಕ ಆನಂದ್ ಪೂಜಾರಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯೋಗ ಗುರು ಶ್ರೀಮತಿ ಪ್ರೇಮಲತಾ ಪಿ., ಅ.ಭಾ.ಸಾ.ಪ ಸುಳ್ಯ ನಗರ ಘಟಕದ ಸಂಚಾಲಕಿ ರಾಜೀವಿ ಎ ಆಗಮಿಸಿದ್ದರು. ಸುಳ್ಯ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಹಾಗೂ ಸಂಪನ್ಮೂಲ ವ್ಯಕ್ತಿ ನವೀನ್ ಎಲ್ಲಂಗಳ ಅವರು ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳು ಮತ್ತು ವೈಜ್ಞಾನಿಕತೆ ಕುರಿತು ಮಾಹಿತಿ ನೀಡಿದರು. ಮಕ್ಕಳಿಗೆ ಸೂರ್ಯ ನಮಸ್ಕಾರ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಇತ್ತೀಚೆಗೆ ನಡೆದ ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿದ ಶರತ್ ಮರ್ಗಿಲಡ್ಕ ರವರಿಗೆ ಗೌರವಾರ್ಪಣೆ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಪೂರ್ಣಿಮಾ ಮಡಪ್ಪಾಡಿ ನಿರೂಪಿಸಿದರು. ಮಮತಾ ಎಸ್.ಕೆ. ಸ್ವಾಗತಿಸಿ, ಆಶಾ ಕೆ. ಟಿ ಸಂಪನ್ಮೂಲ ವ್ಯಕ್ತಿಗಳ ಪರಿಚಯಿಸಿದರು. ಸುನಂದಾ ಜಿ. ಶೆಟ್ಟಿ ಧನ್ಯವಾದಗೈದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!