ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿಯ ಪ್ರಯುಕ್ತ ಧರ್ಮ ಸಮ್ಮೇಳನ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಜ.19 ರಂದು ನಡೆಯಿತು
ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಂಗಾರ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಕಾರದ ಹಣ ಅಗತ್ಯ ಬಿದ್ದಿಲ್ಲ. ಇಲ್ಲಿ ಭಕ್ತರ ಕಾಣಿಕೆಯಿಂದಲೇ ಅಭಿವೃದ್ಧಿ ಕೆಲಸ ಆಗುತ್ತದೆ. ನಾನೊಬ್ಬ ಕೂಲಿ ಕಾರ್ಮಿಕನಾಗಿ ಬಂದವನಾಗಿದ್ದು ಬಂದ ದಾರಿಯನ್ನು ಮರೆಯುವುದಿಲ್ಲ. ನೀವುಗಳು ಬಂದ ದಾರಿಯನ್ನು ಮರೆಯಬೇಡಿ. ಆಡಳಿತವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಮಾಡಲು ಇಚ್ಚಿಸಿದ್ದೇನೆ ಎಲ್ಲರೂ ಸಹಕಾರ ಕೊಡುವಂತೆ ವಿನಂತಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಮೋಹನ್ ರಾಮ್ ಸುಳ್ಳಿ, ಪ್ರಸನ್ನ ದರ್ಬೆ, ವನಜಾ ವಿ ಭಟ್, ಗಿರಿಧರ ರೈ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಸ್ವಾಗತಿಸಿ, ಮೋಹನ್ ರಾಮ್ ಸುಳ್ಳಿ ವಂದಿಸಿದರು. ರತ್ನಾಕರ ಎಸ್ ಮತ್ತು ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.