Ad Widget

ಸುಳ್ಯ : ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ; ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಆರೋಪ

ಸುಳ್ಯದ ಜೂನಿಯರ್ ಕಾಲೇಜು ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸುಳ್ಯದ ಜೂನಿಯರ್ ಕಾಲೇಜ್ ಬಳಿಯಿಂದ ಜ್ಯೋತಿ ವೃತ್ತದವರೆಗೆ ಸುಮಾರು 1 ಕಿಮೀ 33 ಕೆ.ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಸುಳ್ಯದ ಆರ್​ಟಿಐ ಕಾರ್ಯಕರ್ತ ಟಿ.ಎಂ. ಶಾರಿಕ್ ಆರೋಪ ಮಾಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಹೇಳುವ ಪ್ರಕಾರ ಕನಿಷ್ಠ ಐದು ಅಡಿ ಆಳದ ಗುಂಡಿಯಲ್ಲಿ ಈ ಕೇಬಲ್ ಅಳವಡಿಕೆ ಮಾಡಬೇಕಾಗುತ್ತದೆ. ಕೇಬಲ್ ಅಳವಡಿಸುವ ಸ್ಥಳದಲ್ಲೇ ನೀರಿನ ಪೈಪ್​ಲೈನ್ ಸೇರಿದಂತೆ ಇತರ ಕೇಬಲ್​ಗಳು ಇರಬಾರದು. ಆಕಸ್ಮಿಕವಾಗಿ ಇದ್ದಲ್ಲಿ ಅದಕ್ಕೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಐದು ಅಡಿ ಕೆಳಗಡೆ ಈ ಕೇಬಲ್ ಹಾಕಿದ ನಂತರ ಇದರ ಮೇಲೆ ಇಟ್ಟಿಗೆ, ಟೈಲ್ಸ್​ ಅಳವಡಿಸಬೇಕಾಗುತ್ತದೆ. ಆದರೆ ಇಲ್ಲಿ ಕೇಬಲ್ ಸರಿಯಾದ ರೀತಿಯಲ್ಲಿ ಅಳವಡಿಕೆ ಮಾಡಲಾಗಿಲ್ಲ ಎಂದು ಡಿ.ಎಂ. ಶಾರಿಕ್ ಆರೋಪಿಸಿದ್ದಾರೆ.
ಒಡೆದು ಹೋಗಿರುವ ನೀರಿನ ಪೈಪ್​ಗಳ ನಡುವೆ ಕೇಬಲ್ ಅಳವಡಿಕೆ ಮಾಡಿರುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ ದಿನಗಳಲ್ಲಿ ನೀರಿನ ಪೈಪ್ ಕೆಲಸ, ಓಎಫ್​ಸಿ ಕೇಬಲ್ ದುರಸ್ತಿ ಕೆಲಸಕ್ಕಾಗಿ ಗುಂಡಿತೋಡಿದಲ್ಲಿ ಅಪಾಯ ಎದುರಾಗುವ ಸಂಭವ ಇದೆ ಅದ್ದರಿಂದ ಸೂಕ್ತ ಮುಂಜಾಗೃತ ಕ್ರಮ ಕೈಗೊಂಡು, ವೈಜ್ಞಾನಿಕವಾಗಿ ಕೇಬಲ್ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!