
ಸುಳ್ಯ ತಾಲೂಕಿನ ರೈತ,ಕಾರ್ಮಿಕ, ದಲಿತ, ಜನಪರ ಚಳವಳಿಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತ,ಕಾರ್ಮಿಕ, ದಲಿತ ಹಾಗೂ ಜನ ವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಸುಳ್ಯ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಜ.೨೦ ರಂದು ಖಾಸಗಿ ನಿಲ್ದಾಣ ಬಳಿ ನಡೆಯಲಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದರು.ಜ.26 ರಂದು ಬೆಂಗಳೂರಿನಲ್ಲಿ ರೈತ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಪಿ ಜಾನಿ, ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು, ತಾ.ಕಾರ್ಯದರ್ಶಿ ಭರತ್ ಕುಮಾರ್, ರೈತ ಮುಖಂಡ ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.