

ಮಂಗಳೂರಿನ ಪ್ರತಿಷ್ಠಿತ ಸ್ವರ್ಣೋದ್ಯಮಿ, ಸತ್ಯ, ಶುದ್ಧ ಮನಸ್ಸಿನ ಸನ್ಮಾನ್ಯ ಶ್ರೀ ರಮೇಶ್ ಕೃಷ್ಣ ಶೇಟ್ ರವರ ಶೈಕ್ಷಣಿಕ, ಧಾರ್ಮಿಕ ಸಮಾಜಸೇವೆಯನ್ನು ಪರಿಗಣಿಸಿ ಅಮೇರಿಕಾದ ‘ಐಸ್ಟೀನ್’ ವಿಶ್ವವಿದ್ಯಾನಿಲಯವು 2 ವರ್ಷಗಳ ಹಿಂದೆ ಗೌರವ ಡಾಕ್ಟರೇಟ್ ಗೆ ಆಯ್ಕೆಮಾಡಿದ್ದು, ಅವರ ಅನಾರೋಗ್ಯ ಹಾಗೂ ಕೋವಿಡ್ ನಿಬಂಧನೆಯ ಹಿನ್ನೆಲೆಯಿಂದ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಸದ್ಯ ಅವರ ಗೌರವ ಡಾಕ್ಟರೇಟ್ ನ್ನು ಜ. 17 ರಂದು ಸುಳ್ಯದಲ್ಲಿ ನಡೆಯಲಿರುವ ಕನ್ನಡ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಪ್ರದಾನಿಸಲಾಗುವುದೆಂದು ಜ್ಞಾನಮಂದಾರ ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.