

ಕಲ್ಮಡ್ಕ ಗ್ರಾಮದ ಕಾಚಿಲ ನಿವಾಸಿ ಮರಾಟಿ ಸಮುದಾಯದ ಹಿರಿಯರಾಗಿರುವ ನಾರ್ಣು ನಾಯ್ಕ ಕಾಚಿಲ ವಯೋಸಹಜ ಕಾಯಿಲೆಯಿಂದ ಜ.14 ರ ಸಂಜೆ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಶ್ರೀಮತಿ ದೇವಕಿ ಕಾಚಿಲ, ಮಕ್ಕಳಾದ ಚನಿಯಪ್ಪ ನಾಯ್ಕ ಕಾಚಿಲ, ಸೋಮಣ್ಣನಾಯ್ಕ ಕಾಚಿಲ, ಸಾವಿತ್ರಿ ಬಳ್ಳಕ್ಕ, ಗೀತ ಕೇಪು, ಸುಶೀಲ ಕೇಪು, ಶೋಭವತಿ ಪೆರ್ಣಾಜೆ, ಗೋಪಾಲ ಕಾಚಿಲ, ರವಿಚಂದ್ರ ಕಾಚಿಲ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗೃಹವಾದ ಕಾಚಿಲದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.