
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅರಂತೋಡಿನ ಬಿಜೆಪಿ ಕಾರ್ಯಕರ್ತರು ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಂದ್ರ ಮರ್ಕಂಜ, ಪುಷ್ಪಾಧರ ಕೋಡಂಕೇರಿ, ಬಿಜೆಪಿ ಕಾರ್ಯಕರ್ತರದ ರೋಹಿತ್ ಕಲ್ಲುಗದ್ದೆ, ವಿಜಯಕುಮಾರ್ ಶುಂಠಿಯಡ್ಕ, ನವೀನ ಅಂಗಡಿಮಜಲು ಮೊದಲಾದವರು ಉಪಸ್ಥಿತರಿದ್ದರು.
