Ad Widget

ಸುಳ್ಯ ರಥೋತ್ಸವ – ಭಕ್ತರಿಗೆ ಅಭಯ ನೀಡಿದ ಚೆನ್ನಕೇಶವ


ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜ.10 ರಂದು ರಾತ್ರಿ ನಡೆದ ವೈಭವದ ರಥೋತ್ಸವದಲ್ಲಿ ಶ್ರೀ ಚೆನ್ನಕೇಶವ ದೇವರು ವಿರಾಜಮಾನರಾದರು. ಈ ಬಾರಿಯ ಜಾತ್ರೆ ಸಂತೆ, ಆಡಂಬರಗಳಿಲ್ಲದಿದ್ದರೂ ಆಗಮಿಸಿದ ಸಾವಿರಾರು ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು ಪುನೀತರಾದರು.

. . . . . . . . .

ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ ನಡೆದು ರಥೋತ್ಸವ ನಡೆಯಿತು. ರಥಬೀದಿಯಲ್ಲಿ ದೇವರ ರಥೋತ್ಸವದ ಜತೆ ಕಲ್ಕುಡ ದೈವ ಮತ್ತು ಕಾನತ್ತಿಲ ಉದ್ರಾಂಡಿ ದೈವಗಳು ರಥಬೀದಿಯ ವರೆಗೆ ಸಾಗಿ ಭಕ್ತರನ್ನು ಹರಸಿದವು. ಈ ಸಂದರ್ಭದಲ್ಲಿ
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading