ಕೊರೊನಾ ಎಂಬ ಮಹಾಮಾರಿಯಿಂದ ನಮ್ಮ-ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಸಮಯವನ್ನು ಹಾಳು ಮಾಡದೇ ಸದುಪಯೋಗ ಪಡಿಸಿಕೊಂಡ ಅದೆಷ್ಟೋ ಮಂದಿ ಇದ್ದಾರೆ. ಆ ಸಾಲಿಗೆ ಇಲ್ಲೊಬ್ಬಳು ಸೇರುತ್ತಾಳೆ. ಅವಳೇ ಶ್ರೇಯಾ ಮೇರ್ಕಜೆ, ಶ್ರೀ ಗುರುಪ್ರಸಾದ್ ಮೇರ್ಕಜೆ ಮತ್ತು ಪ್ರಮೀಳ ಮೇರ್ಕಜೆರವರ ಪುತ್ರಿ.
ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ 7ನೇ ತರಗತಿ ಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಜತೆಗೆ ನಟನೆ, ನೃತ್ಯ, ಸಂಗೀತ, ಯೋಗ ,ಕ್ರೀಡೆ ಎಲ್ಲದರಲ್ಲೂ ಆಸಕ್ತಿ ಹೊಂದಿದ್ದಾಳೆ. 7 ತಿಂಗಳ ಮಗುವಿನಲ್ಲಿ ಕೃಷ್ಣವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಇವಳು ಸತತ 5 ವರ್ಷದವರೆಗೆ ಪ್ರಥಮ ಉಳಿಸಿಕೊಂಡು ಎಲ್ಲರ ಮೆಚ್ಚುಗೆ ಗೆ ಪಾತ್ರರಾಗಿದ್ದಳು. ಇವಳ ಆಸಕ್ತಿ ತಕ್ಕಂತೆ ಪೋಷಕರು ಪ್ರೋತ್ಸಾಹ ನೀಡಿ ನಟನೆ ಮತ್ತು ನೃತ್ಯ ದ ಕಡೆ ಹೆಚ್ಚಿನ ಗಮನಹರಿಸಲು ಪ್ರಾರಂಭಿಸಿ ಸಂತೋಷ್ ಕುಮಾರ್ ಮಂಗಳೂರು ಇವರ ಮಾರ್ಗದರ್ಶನ ದಲ್ಲಿ ಚಿಗುರು ನೃತ್ಯ ಶಾಲೆ ಸುಳ್ಯದಲ್ಲಿ ನೃತ್ಯ ಅಭ್ಯಾಸ ವನ್ನು ಪ್ರಾರಂಭಿಸಿದಳು. ಬಳಿಕ ನೃತ್ಯ ಪ್ರದರ್ಶನ ವನ್ನು ಮಂಗಳೂರು, ಕುದ್ರೋಳಿ, ಬೆಂಗಳೂರು, ಗೋವಾ ಇನ್ನು ಕೆಲವು ಕಡೆ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗಳಿಸಿದ್ದಾಳೆ. ಮಡಿಕೇರಿ ನಲ್ಲಿ 2019ರಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಚಿಗುರು ಡ್ಯಾನ್ಸ್ ಸ್ಕೂಲ್ ಸುಳ್ಯ ಪ್ರಥಮ ಸ್ಥಾನ ವನ್ನು ಪಡೆದುಕೊಂಡಿತ್ತು. ಕುಮಾರಿ ಶ್ರೇಯ ಪ್ರತಿಭಾ ಕಾರಂಜಿಯಲ್ಲಿ ಹಲವಾರು ಪ್ರಶಸ್ತಿ ಯನ್ನು ಗಳಿಸಿ ತಾನು ಕಲಿತವಿರುವ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾಳೆ. ಸಾಂಪ್ರದಾಯಿಕ ನೃತ್ಯವಾದ ಭರತನಾಟ್ಯವನ್ನು 7ನೇ ವಯಸ್ಸಿನಲ್ಲಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ರವರ ಜೊತೆ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಇದರ ಜೂನಿಯರ್ ಪರೀಕ್ಷೆ ಸಿದ್ಧತೆ ಮಾಡಿಕೊಂಡಿದ್ದಾಳೆ. ಹಲವಾರು ಕಡೆ ಭರತನಾಟ್ಯ ಪ್ರದರ್ಶನ ನೀಡಿರುತ್ತಾಳೆ. ಇದಲ್ಲದೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿರುವ ಶ್ರೇಯಾ ಸಂಗೀತ ಗುರುಗಳಾದ ಶ್ರೀಮತಿ ರೇಖಾ ರೇವತಿ ಹೊನ್ನಾಡಿ ರವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ. ಯೋಗದಲ್ಲಿ ಸಹ ಎತ್ತರ ಮಟ್ಟಕ್ಕೆ ಬೆಳೆಯಬೇಕೆಂಬ ಆಸೆ ಅವಳದ್ದು, ಯೋಗ ಗುರು ಸಂತೋಷ್ ಮುಂಡಕಜೆರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾಳೆ. ಜತೆಗೆ ಕ್ರೀಡೆಯಲ್ಲಿ ಮಿಂಚುತ್ತಿರುವ ಶ್ರೇಯಾ ರಾಜ್ಯಮಟ್ಟದ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಯನ್ನು ಗಳಿಸಿದ್ದಾಳೆ. ಲಾಕ್ ಡೌನ್ ನಲ್ಲಿ ನೃತ್ಯ ಹಾಗೂ ಇನ್ನೀತರ ಹವ್ಯಾಸಗಳಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಯಿತು ಮತ್ತು ನನ್ನಲ್ಲಿ ಪ್ರತಿಭೆಯನ್ನು ಬೆಳೆಸಲು ತುಂಬಾ ಸಹಕಾರಿ ಆಯಿತು ಅಂತ ಶ್ರೇಯ ಹೇಳುತ್ತಾಳೆ. ಈ ಬಹುಮುಖ ಪ್ರತಿಭೆಯ ಶ್ರೇಯಾ ಮುಂದೊಂದು ದಿನ ಊರಿಗೆ ಕೀರ್ತಿ ತರುವಂತಾಗಲಿ, ಭವಿಷ್ಯ ಉಜ್ವಲವಾಗಲಿ.
📝 ಶರತ್ ಮರ್ಗಿಲಡ್ಕ
ಆಟೋ ಚಾಲಕ ಎಲಿಮಲೆ
*📍ನೀವು ಬರಹಗಾರರಾಗಿ* ನಿಮ್ಮೂರಿನಲ್ಲಿ ಕೂಡ ಅದೆಷ್ಟೋ ಮಂದಿ ಸಾಧಕರಿರಬಹುದು. ನೀವು ಬರಹಗಾರರಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡಿ. ನಿಮ್ಮ ಬರಹಗಳನ್ನು ನಮಗೆ ವಾಟ್ಸಾಪ್ ಮಾಡಿ. ವಾಟ್ಸಾಪ್ ಸಂಖ್ಯೆ 9449387044