ಸದೃಢ ದೇಶ ಕಟ್ಟಲು ಸಜ್ಜನಿಕೆಯ ರಾಜಕಾರಣವೇ ಮೆಟ್ಟಿಲಾಗಬೇಕು. ಸಮಾಜದ ಅಶಕ್ತ ವರ್ಗದವರ ಕಣ್ಣೀರು ಒರೆಸಲು ಸಹೃದಯರ ಅವಶ್ಯಕತೆಯಿದೆ ಎಂಬುದರ ಫಲಿತಾಂಶವೇ ಪೆರುವಾಜೆ ವಾರ್ಡ್ 2ರ ಅಭ್ಯರ್ಥಿಗಳ ವಿಜಯ. ಮತದಾರ ಬಾಂಧವರ ಧೃಢ ನಿಶ್ಚಯ ಹಾಗೂ ಕಾರ್ಯಕರ್ತರು ಮಾಡಿದ ಸೇವಾ ಆಂದೋಲನವೇ ಈ ನಮ್ಮ ಗೆಲುವಿಗೆ ಕಾರಣವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ಹೇಳಿದರು. ಪೆರುವಾಜೆಯ ಜೆ.ಡಿ ಅಡಿಟೋರಿಯಂನಲ್ಲಿ ಬಿ.ಜೆ.ಪಿ ವಿಜೇತ ಅಭ್ಯರ್ಥಿಗಳು, ಕಾರ್ಯಕರ್ತರು ಮತ್ತು ಊರವರಿಗೆ ಆಯೋಜಿಸಿದ್ದ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಅವರು ಅಭಿನಂದನಾ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರುವಾಜೆ ವಾರ್ಡ್-2ರ ಅಧ್ಯಕ್ಷರಾದ ರಮೇಶ್ ಮಠತ್ತಡ್ಕ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ರಾಮಕೃಷ್ಣ ಭಟ್ ಕುರುಂಬುಡೇಲು ಮತ್ತು ಉದ್ಯಮಿಗಳಾದ ಲಕ್ಷ್ಮೀನಾರಾಯಣ ಐವರ್ನಾಡು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ನ ವಾರ್ಡ್-2ರ ವಿಜೇತ ಅಭ್ಯರ್ಥಿಗಳಾದ ಪದ್ಮನಾಭ ಶೆಟ್ಟಿ ಪೆರುವಾಜೆ, ರೇವತಿ ಮಠತ್ತಡ್ಕ, ಮಾಧವ ಮುಂಡಾಜೆ ಹಾಗೂ ವಾರ್ಡ್ -1ರ ಅಭ್ಯರ್ಥಿ ಉಮೇಶ್ ಕೆ.ಎಂ.ಬಿ ಮತ್ತು ವಾರ್ಡ್-3ರ ಅಭ್ಯರ್ಥಿ ಮಹಾಲಿಂಗ ನಾಯ್ಕ ಪೆಲತ್ತಡ್ಕ ಉಪಸ್ಥಿತರಿದ್ದರು.
ವಾರ್ಡ್ ಕಾರ್ಯದರ್ಶಿ ಹರ್ಷಿತ್ ಕುಮಾರ್ ಪೆರುವಾಜೆ ಸ್ವಾಗತಿಸಿ, ವಾರ್ಡ್ ಅಧ್ಯಕ್ಷ ರಮೇಶ್ ಮಠತ್ತಡ್ಕ ವಂದಿಸಿದರು. ವಾಸುದೇವ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.