

ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ.10 ರಂದು ನಡೆದ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಿರಿಯೂರು, ಚಿತ್ರದುರ್ಗದವರು ಆಯೋಜಿಸಿದ್ದ 2020-2021ನೇ ಸಾಲಿನ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದ ವೇದಿಕೆ ಕವಿಗೋಷ್ಠಿಯಲ್ಲಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರು ಸ್ವರಚಿತ ಕವನ ವಾಚಿಸಿ, ವೇದಿಕೆಯ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದರು. ಲತಾಶ್ರೀ ಸುಪ್ರೀತ್ ಲೇಖಕಿ, ಕವಯತ್ರಿ, ಹವ್ಯಾಸಿ ಬರಹಗಾರ್ತಿ ಯಾಗಿದ್ದು, ಪ್ರಸ್ತುತ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸುಪ್ರೀತ್ ಮೋಂಟಡ್ಕ ರವರ ಪತ್ನಿ.