
ಎಡಮಂಗಲ ಜಾಲ್ತಾರು ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬದ ಧರ್ಮದೈವ ಹಾಗೂ ಉಪದೈವಗಳಿಗೆ ಧರ್ಮ ನಡಾವಳಿ ಕಾರ್ಯಕ್ರಮವು ಜ.08 ಹಾಗೂ ಜ.09 ರಂದು ಜರುಗಿತು.
ಬೆಳಗ್ಗೆ ಗಣಹೋಮ ನೆರವೇರಿತು. ತದನಂತರ ರಾತ್ರಿಯಿಂದ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ರುದ್ರಚಾಮುಂಡಿ, ಗುಳಿಗ ಹಾಗೂ ಉಪದೈವಗಳಿಗೆ ನೇಮ ನಡಾವಳಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು – ಮಿತ್ರರು ಹಾಗೂ ಊರವರು ಉಪಸ್ಥಿತರಿದ್ದರು.




