ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಉತ್ತಮ ವೈದ್ಯರ ಅವಶ್ಯಕತೆ ಅತೀ ಹೆಚ್ಚಾಗಿದ್ದು ,ಇದೀಗ ಸುಬ್ರಹ್ಮಣ್ಯದ ಕಾರ್ತಿಕೆಯ ವಸತಿಗೃಹ ಕಟ್ಟಡದಲ್ಲಿ ಡಾ. ಆದಿತ್ಯ ಚನಿಲ ರವರು ಹೋಮಿಯೋಪತಿ ಕ್ಲಿನಿಕ್ ಆರಂಭಿಸಿದ್ದಾರೆ.
ಡಾ. ಆದಿತ್ಯ ರವರು ಪ್ರಾಥಮಿಕ ಶಿಕ್ಷಣವನ್ನು ಗುತ್ತಿಗಾರು ಶಾಲೆಯಲ್ಲಿ ಹಾಗೂ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಮುಗಿಸಿ, ಐದುವರೆ ವರ್ಷ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್ ನಲ್ಲಿ ಬಿ ಹೆಚ್ ಎಂ ಎಸ್ (ಬ್ಯಾಚುಲರ್ ಒಫ್ ಹೋಮಿಯೋಪತಿ ಮೆಡಿಸಿನ್ ಆಂಡ್ ಸೈನ್ಸ್) ಪದವಿ ಪಡೆದಿದ್ದಾರೆ. ಬಳಿಕ ಪಂಜದ ಡಾ. ಪ್ರಸನ್ನ ಕುಮಾರ್ ರವರ ಬಳಿ ಸರ್ವೀಸ್ ಆರಂಭಿಸಿದರು. ಇವರು ಇದೀಗ ಸುಬ್ರಹ್ಮಣ್ಯದಲ್ಲಿ ಆಸ್ಪತ್ರೆಗಳ ಹಾಗೂ ವೈದ್ಯರ ಕೊರತೆ ಮನಗಂಡು ನೂತನ ಕ್ಲಿನಿಕ್ ಆರಂಭಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಲತಾ ಕ್ಲಿನಿಕ್ ನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಬಾಲಸುಬ್ರಹ್ಮಣ್ಯ ಭಟ್, ಹಾಗೂ ಅತಿಥಿಗಳಾದ ಸೋಮಶೇಖರ್ ನಾಯ್ಕ್, ಜಯಪ್ರಕಾಶ್, ಗಿರೀಶ್, ಶಂಕರ ಭಟ್ ಉಪಸ್ಥಿತರಿದ್ದರು.