
ನಿಂತಿಕಲ್ಲು – ಬೆಳ್ಳಾರೆ ಮುಖ್ಯ ರಸ್ತೆಯ ಬಳಿ ಆನಂದ ಗೌಡ ಬೊಳ್ಳಾಜೆ ಮಾಲಕತ್ವದ ಹೋಟೆಲ್ ಮಹಾರಾಣಿ ಇಂದು
ಬೆಳಗ್ಗೆ ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಶ್ರೀ ಶಂಭಯ್ಯ ಭಟ್ ಮುಂಡುಗಾರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಲಕರಾದ ಆನಂದ ಬೊಳ್ಳಾಜೆ ಹಾಗೂ ಕುಟುಂಬಸ್ಥರು, ಕಿಟ್ಟಣ್ಣ ಗೌಡ ಕಳಂಜ, ಶೇಷಪ್ಪ ಗೌಡ ಹುದೇರಿ, ಪ್ರದೀಪ್ ಹುದೇರಿ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು ಲಭ್ಯವಿದ್ದು ಚಾ, ಕಾಫಿ, ತಿಂಡಿ ಹಾಗೂ ಊಟ ದೊರೆಯಲಿದೆ. ಅಲ್ಲದೇ ಸಭೆ, ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.
