ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಮೋನಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಪುತ್ರ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ರಕಾಶ ಬಿ.ಎಂ. ಬಳ್ಳಡ್ಕ ಡಿಸೆಂಬರ್ ನಲ್ಲಿ ಸೇನಾ ನಿವೃತ್ತಿ ಹೊಂದಿದ್ದಾರೆ.
ಇವರು ಡಿಸೆಂಬರ್ 2003 ರಲ್ಲಿ ಭಾರತೀಯ ಸೇನೆಯ ಎಂಜಿನಿಯರ್ ವಿಭಾಗದಲ್ಲಿ ಸರ್ವೆ ಟೆಕ್ನಿಷಿಯನ್ ಆಗಿ ಸೇರ್ಪಡೆಯಾಗಿ 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2005 ರಿಂದ 2006 ತನಕ ಉತ್ತರ ಪ್ರದೇಶದ ಜಾನ್ಸಿ, 2006 ರಿಂದ 2008 ಪಂಜಾಬ್ ಪಟಿಯಾಲ, 2008 ರಿಂದ 2010 ಜಮ್ಮು ಕಾಶ್ಮೀರ (ರಾಸ್ಟ್ರಿಯಾ ರೈಫಲ್ಸ್), 2010 ರಿಂದ 2016 ಹರಿಯಾಣ ಹಿಸ್ಸಾರ್, 2016 ರಿಂದ 2020 ಉತ್ತರ ಪ್ರದೇಶ ಜಾನ್ಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಜಯಪ್ರಕಾಶ್ ಅವರ ಪತ್ನಿ ಶ್ರೀಮತಿ ದಿವ್ಯ ಎಂ.ಎಸ್.ಡಬ್ಲ್ಯೂ ಪದವೀಧರೆಯಾಗಿದ್ದು, ಇಬ್ಬರು ಪುತ್ರಿಯರು ಇಂಪನ ಮತ್ತು ಶೃಂಗ. ಇಂಪನ ಲಿಟ್ಲ್ ಪ್ಲವರ್ ವಿದ್ಯಾಸಂಸ್ಥೆ ಮಡಿಕೇರಿ ಇಲ್ಲಿ 2ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.