
ಸುಳ್ಯ ತಾಲೂಕಿನಲ್ಲಿ ತೆರವಾಗಿರುವ ಕಲ್ಮಡ್ಕ ಗ್ರಾಮದ ಕಲ್ಮಡ್ಕ, ಸುಳ್ಯ ಕಸಬಾ ಗ್ರಾಮದ ವಾರ್ಡ್ ಸಂಖ್ಯೆ-3ರ ಜಯನಗರ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅದೇ ಗ್ರಾಮದ ಮತ್ತು ಅದೇ ವಾರ್ಡ್ ಸಂಖ್ಯೆಯ 18-35 ವರ್ಷ ಒಳಗಿನ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ ತೇರ್ಗಡೆ ಹಾಗೂ ಗರಿಷ್ಠ 9ನೇ ತರಗತಿ ತೇರ್ಗಡೆ ಆಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‌ಲೈನ್ ವೆಬ್‌ಸೈಟ್ ವಿಳಾಸ WWW.anganwadirecruit.kar.nic.in ಆಗಿರುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ 07.01.2021 ರಿಂದ ದಿನಾಂಕ 06.02.2021 ಸಂಜೆ 5.30 ಗಂಟೆವರೆಗೆ ಕಾಲಾವಕಾಶವಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08257-230239 ಇದರ ಮೂಲಕ ಕಛೇರಿ ಸಮಯದಲ್ಲಿ ಪಡಕೊಳ್ಳಬಹುದು.