
ನಾರ್ಕೋಡು ಕೋಲ್ಚಾರು ಕನ್ನಡಿತೋಡು ಪಿಡಬ್ಲ್ಯೂಡಿ ರಸ್ತೆ ಅಭಿವೃದ್ಧಿಗೆ ಮತ್ತು ಅಗಲೀಕರಣಕ್ಕೆ 2018 -19 ನೇ ಸಾಲಿನ ಪ್ಯಾಕೆಜ್ ನಂಬ್ರ 351 ರಂತೆ ಹತ್ತುವರೆ ಕೋಟಿ ಅನುದಾನ ಬಿಡುಗಡೆಗೊಂಡು ವರ್ಷವೇ ಕಳೆದರೂ ಇಲಾಖೆಯ ಅಧಿಕಾರಿಗಳ , ಗುತ್ತಿಗೆದಾರರ ಮಂದಗತಿಯ ಕೆಲಸದಿಂದಾಗಿ ಕಾಮಗಾರಿ ವಿಳಂಬಗೊಂಡು ಸಾರ್ವಜನಿಕರಿಗೆ , ವಾಹನ ಸವಾರರಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ತೀರ ಹದಗೆಟ್ಟಿರುವ ನಮ್ಮ ರಸ್ತೆಯ ಕಾಮಗಾರಿ 10 ದಿನಗಳ ಒಳಗೆ ಆರಂಭಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರನ್ನು ಸೇರಿಸಿಕೊಂಡು ಪಿ ಡಬ್ಲ್ಯೂ ಡಿ ಇಲಾಖೆಯ ಎದುರು ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.