ಮತ್ತು ಬರುವ ಸ್ಪ್ರೇ ಸಿಂಪಡಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಳು ಶಾಲಾ ಬಾಲಕಿ, ಇದೀಗ ಪೋಲೀಸರ ತನಿಖೆಯಿಂದ ಇದು ಕಟ್ಟು ಕಥೆ ಎಂದು ಬಯಲಾಗಿ ಪ್ರಕರಣಕ್ಕೆ ರೋಚಕ ತಿರುವು ಪಡೆದಿದೆ.
ಘಟನೆ ವಿವರ :
ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಹಾಸನಡ್ಕ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳು ಸ್ಮೃತಿ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಳು. ಆ ಬಾಲಕಿಯನ್ನು ಸ್ಥಳೀಯರು ನೋಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿತ್ತು.
ಈ ರಸ್ತೆಯಲ್ಲಿ ಬಂದ ಗಂಗಾಧರ ಹಿರಿಯಡ್ಕ ರವರು ಬಾಲಕಿ ಬಿದ್ದಿರುವುದನ್ನು ನೋಡಿ ಸ್ಥಳೀಯರಿಗೆ ತಿಳಿಸಿದ್ದಾರೆ. ಈ ವೇಳೆಗೆ ಅಲ್ಲಿಗೆ ಇನ್ನೊರ್ವ ಬೈಕ್ ಸವಾರ ಮತ್ತು ಪಿಕಪ್ ಚಾಲಕರ ಸಹಾಯದಿಂದ ಕುಕ್ಕುಜಡ್ಕಕ್ಕೆ ಬಾಲಕಿಯನ್ನು ಕರೆತಂದರು. ಅಲ್ಲಿ ನರ್ಸ್ ಅವರಿಗೆ ತೋರಿಸಿ ರಿಕ್ಷಾದ ಮುಖಾಂತರ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಜತೆಗೆ ಗ್ರಾ.ಪಂ.ಸದಸ್ಯ ಜನಾರ್ದನ ಪೈಲೂರು, ಹುಡುಗಿಯ ಸಹೋದರರು ರಿಕ್ಷಾದಲ್ಲಿ ಬಂದು ಆಸ್ಪತ್ರೆಗೆ ಬಂದು ದಾಖಲಿಸಿದ್ದರು.
ಪ್ರಜ್ಞೆ ಬಂದ ಬಳಿಕ ಬಾಲಕಿ ಈ ಬಗ್ಗೆ ವಿವರಿಸಿದ್ದಾಳೆ. ಕುಕ್ಕುಜಡ್ಕ ಶಾಲೆಗೆ ಮಧ್ಯಾಹ್ನ ಹೋಗುತ್ತಿದ್ದಾಗ ಹಾಸನಡ್ಕದ ಸಮೀಪ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ಮತ್ತು ಬರುವ ಸ್ಪ್ರೇ ಮಾಡಿ ತನ್ನ ಪ್ರಜ್ಞೆ ತಪ್ಪಿಸಿದರೆಂದೂ, ಆ ರಸ್ತೆಯಲ್ಲಿ ಬೇರೆ ವಾಹನ ಬರುವ ಶಬ್ಧ ಕೇಳಿ ಅಲ್ಲಿ ಬಿಟ್ಟು ಹೋದರೆಂದು ಬಾಲಕಿ ತಿಳಿಸಿದ್ದಳು.
ಈ ಘಟನೆ ನಡೆದ ಕೂಡಲೇ ಅಲರ್ಟ್ ಆದ ಪೋಲೀಸರು ಬಾಲಕಿಯಿಂದ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದರು. ಈ ವೇಳೆ ಬಾಲಕಿಗೆ ತನ್ನ ತಪ್ಪಿನ ಅರಿವಾಗಿ ಸತ್ಯ ಬಿಚ್ಚಿಟ್ಟಿದ್ದಾಳೆ. ನೋಟ್ಸ್ ಬರೆಯಲು ಕಷ್ಟವಾಗುತ್ತಿದೆ. ಶಾಲೆ ಹೋಗಲು ಮನಸ್ಸಿಲ್ಲ ಹಾಗಾಗಿ ಈ ರೀತಿ ಮಾಡಿದ್ದೇನೆ ಎಂದು ಸತ್ಯ ಬಿಚ್ಚಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಅಪಹರಣದಂತ ಘಟನೆಗಳು ಇತ್ತೀಚೆಗೆ ನಡೆಯುತ್ತಿರುವುದರಿಂದ ಬೆಚ್ಚಿಬಿದ್ದಿದ್ದ ಪೋಲೀಸರು, ಜನತೆ ನಿಟ್ಟುಸಿರು ಬಿಡುವಂತಾಯಿತು.