ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಡಿ.16 ಕೊನೆಯ ದಿನವಾಗಿದ್ದು ಸುಳ್ಯ ತಾಲೂಕಿನಲ್ಲಿ ಒಟ್ಟು 851 ನಾಮಪತ್ರ ಸಲ್ಲಿಕೆಯಾಗಿದೆ. ಡಿ. 17 ರಂದು ನಾಮಪತ್ರ ಪರಿಶೀಲನೆ ನಡೆದು 20 ನಾಮಪತ್ರ ತಿರಸ್ಕೃತ ಗೊಂಡಿದೆ. ಕಣದಲ್ಲಿ 831 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂತೆಗೆಯಲು ಡಿ.19 ಕೊನೆಯ ದಿನವಾಗಿದೆ.
ಕೊಡಿಯಾಲ ಗ್ರಾ.ಪಂ.ನ 6 ಸ್ಥಾನಗಳಿಗೆ 22, ಐವತ್ತೊಕ್ಲು (ಪಂಜ) ಗ್ರಾ.ಪಂ.ನ 13 ಸ್ಥಾನಗಳಿಗೆ 39, ಕಲ್ಮಡ್ಕ ಗ್ರಾ.ಪಂ.ನ 9 ಸ್ಥಾನಗಳಿಗೆ 26, ಬಾಳಿಲ ಗ್ರಾ.ಪಂ.ನ 10 ಸ್ಥಾನಗಳಿಗೆ 28, ಕಳಂಜ ಗ್ರಾ.ಪಂ.ನ 6 ಸ್ಥಾನಗಳಿಗೆ 14, ಬೆಳ್ಳಾರೆಯ ಗ್ರಾ.ಪಂ.ನ 14 ಸ್ಥಾನಗಳಿಗೆ 50, ಪೆರುವಾಜೆಯ ಗ್ರಾ.ಪಂ.ನ 8 ಸ್ಥಾನಗಳಿಗೆ 24, ಐವರ್ನಾಡು ಗ್ರಾ.ಪಂ.ನ 13 ಸ್ಥಾನಗಳಿಗೆ 38, ಕನಕಮಜಲು ಗ್ರಾ.ಪಂ.ನ 7 ಸ್ಥಾನಗಳಿಗೆ 19, ಅಮರ ಮುಡ್ನೂರು ಗ್ರಾ.ಪಂ.ನ 17 ಸ್ಥಾನಗಳಿಗೆ 49, ಗುತ್ತಿಗಾರು ಗ್ರಾ.ಪಂ.ನ 17 ಸ್ಥಾನಗಳಿಗೆ 52, ದೇವಚಳ್ಳ ಗ್ರಾ.ಪಂ.ನ 10 ಸ್ಥಾನಗಳಿಗೆ 25, ಹರಿಹರಪಲ್ಲತ್ತಡ್ಕ ಗ್ರಾ.ಪಂ.ನ 6 ಸ್ಥಾನಗಳಿಗೆ 25, ಕೊಲ್ಲಮೊಗ್ರ ಗ್ರಾ.ಪಂ.ನ 8 ಸ್ಥಾನಗಳಿಗೆ 29, ಮಡಪ್ಪಾಡಿ ಗ್ರಾ.ಪಂ.ನ 5 ಸ್ಥಾನಗಳಿಗೆ 16, ಮರ್ಕಂಜ 9 ಕ್ಕೆ 25, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ನ 8 ಸ್ಥಾನಗಳಿಗೆ 21, ಉಬರಡ್ಕ ಮಿತ್ತೂರು ಗ್ರಾ.ಪಂ.ನ 35 ಸ್ಥಾನಗಳಿಗೆ, ಜಾಲ್ಸೂರು ಗ್ರಾ.ಪಂ.ನ 17 ಸ್ಥಾನಗಳಿಗೆ 55, ಮಂಡೆಕೋಲು ಗ್ರಾ.ಪಂ.ನ 15 ಸ್ಥಾನಗಳಿಗೆ 45, ಅಜ್ಜಾವರ ಗ್ರಾ.ಪಂ.ನ 18 ಸ್ಥಾನಗಳಿಗೆ 47, ಆಲೆಟ್ಟಿ ಗ್ರಾ.ಪಂ.ನ 21 ಸ್ಥಾನಗಳಿಗೆ 52, ಅರಂತೋಡು ಗ್ರಾ.ಪಂ.ನ 15 ಸ್ಥಾನಗಳಿಗೆ 46, ಸಂಪಾಜೆ ಗ್ರಾ.ಪಂ.ನ 14 ಸ್ಥಾನಗಳಿಗೆ 45, ಮುರುಳ್ಯ ಗ್ರಾ.ಪಂ.ನ 7 ಸ್ಥಾನಗಳಿಗೆ 21 ನಾಮಪತ್ರ ಸಲ್ಲಿಕೆಯಾಗಿದೆ.
20 ನಾಮಪತ್ರ ತಿರಸ್ಕೃತ
ಒಟ್ಟು 851 ನಾಮಪತ್ರ ಸಲ್ಲಿಕೆಯಾಗಿದ್ದು ಇಂದು ನಾಮಪತ್ರ ಪರಿಶೀಲನೆ ನಡೆದಾಗ 20 ನಾಮಪತ್ರ ತಿರಸ್ಕೃತಗೊಂಡಿದ್ದು 831 ಅಭ್ಯರ್ಥಿಗಳು ಕಣದಲ್ಲಿ ಉಳಿದ್ದುಕೊಂಡಿದ್ದಾರೆ.
ಬೆಳ್ಳಾರೆ ಗ್ರಾ.ಪಂ.ಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ 2 , ಐವರ್ನಾಡು ಗ್ರಾ.ಪಂ.ನಲ್ಲಿ 1, ಅಜ್ಜಾವರ ಗ್ರಾ.ಪಂ.ನಲ್ಲಿ 3 , ಆಲೆಟ್ಟಿ ಗ್ರಾ.ಪಂ.ನಲ್ಲಿ 3, ಅರಂತೋಡು ಗ್ರಾ.ಪಂ.ನಲ್ಲಿ 1, ಗುತ್ತಿಗಾರು ಗ್ರಾ.ಪಂ.ನಲ್ಲಿ 3, ಹರಿಹರಪಲ್ಲತ್ತಡ್ಕ ಗ್ರಾ.ಪಂ.ನಲ್ಲಿ 5, ಪಂಜ ಗ್ರಾ.ಪಂ.ನಲ್ಲಿ 1, ಮುರುಳ್ಯ ಗ್ರಾ.ಪಂ.ನಲ್ಲಿ 1 ನಾಮಪತ್ರ ತಿರಸ್ಕೃತ ವಾಗಿದೆ.