ರಾಜ್ಯದ 5762 ಗ್ರಾಮ ಪಂಚಾಯತ್ ಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಇಂದು ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಡಿಸೆಂಬರ್ 22ರಂದು ಪ್ರಥಮ ಹಂತ ಹಾಗೂ ಡಿ.27ಕ್ಕೆ ಎರಡನೇ ಹಂತದ ಚುನಾವಣೆ ನಿಗದಿಯಾಗಿದೆ. ಡಿ. 30ರಂದು ಮತಎಣಿಕೆ ನಡೆಯಲಿದೆ.
ಇಂದಿನಿಂದಲೇ ನೀತಿಸಂಹಿತೆ ಜಾರಿಯಾಗಿದೆ.
ಮೊದಲನೆ ಹಂತದ ಡಿಸೆಂಬರ್ 22 ರಂದು ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಮೂಡುಬಿದಿರೆ, ಬಂಟ್ವಾಳ ಗ್ರಾಮಪಂಚಾಯತ್ ಗಳಿಗೆ ಹಾಗೂ ಡಿಸೆಂಬರ್ 27 ರಂದು ಎರಡನೇ ಹಂತದಲ್ಲಿ ಪುತ್ತೂರು, ಬೆಳ್ತಂಗಡಿ,ಕಡಬ, ಸುಳ್ಯ ತಾಲೂಕಿನ ಗ್ರಾಮಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದ್ದು.