ಮಂಗಳೂರಿನಲ್ಲಿ ಉಗ್ರ ಸಂಘಟನೆಗೆ ಜೈಕಾರ ಹಾಕುವ ಗೋಡೆ ಬರಹವನ್ನು ಖಂಡಿಸಿ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎ.ಬಿ.ವಿ.ಪಿ ಸುಳ್ಯ ನಗರ ವತಿಯಿಂದ ತಹಶಿಲ್ದಾರ್ ಮುಖಾಂತರ ಮಾನ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು .
2008 ನವೆಂಬರ್ 26 ದೇಶ ಕಂಡ ಕರಾಳ ದಿನ. ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೋಲಿಸರು, ಸೇರಿ ಹಲವಾರು ನಾಗರಿಕರು ಮೃತಪಟ್ಟ ದಿನ. ಇಡೀ ದೇಶವೇ ಶ್ರದ್ಧಾಂಜಲಿ ಸಲ್ಲಿಸಬೇಕಾದ ಈ ದಿನ ಕೆಲ ದೇಶದ್ರೋಹಿಗಳು ಈ ರೀತಿಯ ಗೋಡೆ ಬರಹಗಳನ್ನು ಬರೆದು ಮಂಗಳೂರಿನ ಶಾಂತಿಯನ್ನು ಕೆಡಿಸುವ ಮೂಲಕ ವಿಕೃತಿ ಮೆರೆದಿದ್ದಾರೆ .ಈ ಕೂಡಲೇ ಈ ಘಟನೆಯ ಹಿಂದಿರುವ ದೇಶ ದ್ರೋಹಿಗಳನ್ನು ಬಂಧಿಸದಿದ್ದರೆ ಮುಂದೆ ಇಂತಹ ಘಟನೆಗಳು ಮರುಕಳಿಸಿ ದೊಡ್ಡ ಅನಾಹುತವೇ ಸಂಭವಿಸಬಹುದು. ಈ ನಿಟ್ಟಿನಲ್ಲಿ ಈ ಘಟನೆಯ ಹಿಂದಿರುವ ದೇಶದ್ರೋಹಿಗಳನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಎ.ಬಿ.ವಿ.ಪಿ ಸುಳ್ಯ ನಗರ ಕಾರ್ಯದರ್ಶಿ ರುಚಿರ್ ರೈ, ಸಹ ಕಾರ್ಯದರ್ಶಿ ರವೀಶ ಕೇವಳ ಕಾರ್ಯಕರ್ತರಾದ ಮೇಘರಾಜ್,ಕೀರ್ತನ್ ರವರು ಉಪಸ್ಥಿತರಿದ್ದರು
- Tuesday
- December 3rd, 2024