Ad Widget

ಬೆಳ್ಳಾರೆ: ಎಸ್ಎಂಎ (ಸುನ್ನಿ ಮ್ಯಾನೇಜ್ಮೆಂಟ್ ಸೋಸಿಯೇಷನ್) ಎಲೆಕ್ಷನ್ ಕ್ರಿಯೇಶನ್ ಸಮಾವೇಶ

ಎಸ್ಎಂಎ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಬೆಳ್ಳಾರೆ ಝೋನಲ್ ಇದರ ಆಶ್ರಯದಲ್ಲಿ ಝೋನಲ್ ಮಟ್ಟದ ಎಲೆಕ್ಷನ್ ಕ್ರಿಯೇಷನ್ ಸಮಾವೇಶ ಬೆಳ್ಳಾರೆ ಸುನ್ನಿ ಸೆಂಟರ್ ಸಭಾಂಗಣದಲ್ಲಿ ನ. 29ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಬೆಳ್ಳಾರೆ ಜೋನಲ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ವಹಿಸಿದ್ದರು. ಸೈಯದ್ ಹಾಮಿದ್ ತಂಙಳ್ ತಂಬಿನಮಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

. . . . . . . . .

ದಕ ಜಿಲ್ಲಾ ಈಸ್ಟ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ , ಎಲೆಕ್ಷನ್ ಕ್ರಿಯೇಷನ್ ಸಮಿತಿ ಚೇರ್ಮನ್ ಸೈಯದ್ ಸಾದಾತ್ ತಂಙಳ್ ಕರುವೇಲು ಕ್ರಿಯೇಷನ್ ಕಾರ್ಯಗಾರವನ್ನು ನಡೆಸಿದರು. ಈ ಸಂದರ್ಭದಲ್ಲಿ ಜೋನಲ್ ಸಮಿತಿಯ ಕ್ರಿಯೇಶನ್ ಚೇರ್ಮನ್ ಆಗಿ ಅಬೂಬಕ್ಕರ್ ಕೊಡಿಂಬಾಳ, ಚೀಫ್ ಡೈರೆಕ್ಟರ್ ಆಗಿ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರು, ಡೈರೆಕ್ಟರ್ಸ್ ಗಳಾಗಿ ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ, ಹನೀಫ್ ಹಾಜಿ ಇಂದ್ರಾಜೆ, ಹಸೈನಾರ್ ಗುತ್ತಿಗಾರ್, ಇವರಿಗೆ ಗುರುತಿನ ಚೀಟಿಯನ್ನು ನೀಡಿ ದಾಖಲೆಪತ್ರಗಳನ್ನು ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ತಾಜುಲ್ ಉಲಮಾ ಅನುಸ್ಮರಣೆ , ಧ್ರುವ ಮಾಜ್ಲಿಸ್ ಸೈಯದ್ ಹಾಮಿದ್ ತಂಙಳ್ ರವರ ನೇತೃತ್ವದಲ್ಲಿ ನಡೆಯಿತು. ವೇದಿಕೆಯಲ್ಲಿ ನಾಯಕರುಗಳಾದ ಮಹಮ್ಮದ್ ಕುಂಞಿ ಗೂನಡ್ಕ, ಎಸ್ಎಂಎಸ್ ದ.ಕ ಜಿಲ್ಲಾ ಈಸ್ಟ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ, ರಾಜ್ಯ ಸಮಿತಿ ಉಪಾಧ್ಯಕ್ಷ ಅಹಮದ್ ಎ.ಕೆ, ಹಸ್ಸನ್ ಸಖಾಫಿ ಬೆಳ್ಳಾರೆ, ಅಬ್ದುಲ್ ರಹಿಮಾನ್ ಸಖಾಫಿ ಬೈತಡ್ಕ, ಶಂಸುದ್ದೀನ್ ಸಹದಿ ಕಡಬ, ಉಸ್ಮಾನ್ ಹಾಜಿ ಚೆನ್ನಾರ್, ಹಸೈನಾರ್ ಜಯನಗರ, ಅಬೂಬಕ್ಕರ್ ಕೋಡಿಂಬಾಳ ಮೊದಲಾದವರು ಉಪಸ್ಥಿತರಿದ್ದರು. ಈಷ್ಟ್ ಜಿಲ್ಲಾ ಸಮಿತಿ ಎಲೆಕ್ಷನ್ ಕ್ರಿಯೇಶನ್ ಚೀಪ್ ಡೈರೆಕ್ಟರ್ ಅಬ್ದುಲ್ಲಾ ಅಹ್ಸನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ನಾಸಿರ್ ಸಹದಿ ಧನ್ಯವಾದ ಸಮರ್ಪಿಸಿದರು. ಹಮೀದ್ ಅಲ್ಫ ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಮಾವೇಶದಲ್ಲಿ ಎಲ್ಲಾ ರಿಜಿನಲ್ ವ್ಯಾಪ್ತಿಯ ಪದಾಧಿಕಾರಿಗಳು, ಮೊಹಲ್ಲಾ ಕಮಿಟಿಯ ಅಧ್ಯಕ್ಷ ಕಾರ್ಯದರ್ಶಿಗಳು, ಜೋನಲ್ ಸಮಿತಿಯ ಸದಸ್ಯರು, ರೇಂಜ್ ಮಟ್ಟದ ಎಸ್ ಜೆ ಎಂ ಅಧ್ಯಕ್ಷ ಕಾರ್ಯದರ್ಶಿಗಳು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading