ಗುಂಡಿಅಂಗಡಿ ಮೈರ್ಪಳ್ಳ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 5ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟೀಕರಣ ನಡೆಯಲಿದೆ.
ಈ ಸಂದರ್ಭದಲ್ಲಿ ಜಿ.ಪಂ.ಇಂಜಿನಿಯರ್ ಹನುಮಂತ ರಾಯಪ್ಪ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಸಹಕಾರಿ ಭಾರತಿ ಅಧ್ಯಕ್ಷ ಪ್ರವೀಣ್ ಎಸ್.ರಾವ್, ಮಾಧನ ನಂದಗೋಕುಲ, ಶರತ್ ಕಾಸಿನಗೊಡ್ಲು, ಭಾನುಪ್ರಕಾಶ್ ಪೆಲ್ತಡ್ಕ, ಗುತ್ತಿಗೆದಾರ ಹರಿಪ್ರಸಾದ್ ಎಲಿಮಲೆ ಮತ್ತಿತರರು ಉಪಸ್ಥಿತರಿದ್ದರು.